ಕರ್ನಾಟಕ

karnataka

ETV Bharat / state

ಭಾರತೀಯ ಸ್ಪರ್ಧಾ ಆಯೋಗದಿಂದ ತನಿಖೆ : ಹೈಕೋರ್ಟ್ ಮೆಟ್ಟಿಲೇರಿದ Google - Google complaint to High Court

ಆ್ಯಪ್ ಸೇವೆಗೆ ಸಂಬಂಧಿಸಿದಂತೆ ಪ್ಲೇ ಸ್ಟೋರ್ ಬಿಲ್ಲಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳಲು ನಿಗದಿಪಡಿಸಿದ್ದ ಗಡುವನ್ನು ಪದೇಪದೆ ಬದಲಾಯಿಸುತ್ತಿದೆ. ಈ ಮೂಲಕ ಸ್ಟಾರ್ಟ್‌ಅಪ್ ಆ್ಯಪ್​ಗಳ ನಡುವೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಸ್ಪರ್ಧಾ ಆಯೋಗವು ಗೂಗಲ್ ವಿರುದ್ಧ ತನಿಖೆಗೆ ಮುಂದಾಗಿದೆ..

high-court
ಹೈಕೋರ್ಟ್

By

Published : Dec 28, 2021, 5:14 PM IST

ಬೆಂಗಳೂರು :ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಗೂಗಲ್ ಪ್ಲೇ ಸ್ಟೋರ್ ನಿಯಮಗಳಿಗೆ ಸಂಬಂಧಿಸಿದಂತೆ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿ ತಂತ್ರಜ್ಞಾನ ದೈತ್ಯ ಗೂಗಲ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ.

ಪ್ಲೇ ಸ್ಟೋರ್ ನಿಯಮಗಳ ಕುರಿತು ಆ್ಯಪ್ ಡೆವಲಪರ್​ಗಳಿಂದ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆ ಸಿಸಿಐ ಗೂಗಲ್ ವಿರುದ್ಧ ತನಿಖೆ ಆರಂಭಿಸಿದೆ. ತನಿಖೆಗೆ ಸಂಬಂಧಿಸಿದಂತೆ ಸಿಸಿಐ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಲು ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಕೋರಿದೆ.

ಗೂಗಲ್ ವಿರುದ್ಧದ ಆರೋಪವೇನು?

ಗೂಗಲ್ ತನ್ನ ಪ್ಲೇ ಸ್ಟೋರ್​ನಲ್ಲಿ ತನಗೆ ಬೇಕಾದ ಆ್ಯಪ್​ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಅನಾರೋಗ್ಯಕರ ಸ್ಪರ್ಧೆಯ ವಾತಾವರಣ ನಿರ್ಮಿಸುತ್ತಿದೆ. ಅಲ್ಲದೇ, ಕೆಲ ಆ್ಯಪ್ ಡೆವಲಪರ್​ಗಳಿಂದ ಹೆಚ್ಚಿನ ಕಮಿಷನ್ ಪಡೆಯುತ್ತಿದ್ದು, ತಾರತಮ್ಯ ನೀತಿ ಅನುಸರಿಸುತ್ತಿದೆ.

ಆ್ಯಪ್ ಸೇವೆಗೆ ಸಂಬಂಧಿಸಿದಂತೆ ಪ್ಲೇ ಸ್ಟೋರ್ ಬಿಲ್ಲಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳಲು ನಿಗದಿಪಡಿಸಿದ್ದ ಗಡುವನ್ನು ಪದೇಪದೆ ಬದಲಾಯಿಸುತ್ತಿದೆ. ಈ ಮೂಲಕ ಸ್ಟಾರ್ಟ್‌ಅಪ್ ಆ್ಯಪ್​ಗಳ ನಡುವೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಸ್ಪರ್ಧಾ ಆಯೋಗವು ಗೂಗಲ್ ವಿರುದ್ಧ ತನಿಖೆಗೆ ಮುಂದಾಗಿದೆ.

ಓದಿ:ವಿಧಾನ ಪರಿಷತ್​​​ನಲ್ಲಿ ಹಿರಿಯರ ಕೊರತೆ : ಕಾಂಗ್ರೆಸ್ ರಾಜ್ಯ ನಾಯಕರಿಗೆ ಹೊಸ ಚಿಂತೆ

ABOUT THE AUTHOR

...view details