ತಪ್ಪು ಅರ್ಥ ಬಂದಿರುವುದಕ್ಕೆ ಮತ್ತು ಯಾವುದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾವು ಕ್ಷಮೆ ಯಾಚಿಸುತ್ತೇವೆ ಎಂದು ಗೂಗಲ್ ಟ್ವೀಟ್ ಮಾಡಿದೆ.
ಗೂಗಲ್ನಲ್ಲಿ 'ಭಾರತದ ಕೊಳಕು ಭಾಷೆ' ಯಾವುದು ಎಂದು ಹುಡುಕಿದರೆ 'ಕನ್ನಡ' ಎಂದು ತೋರಿಸುತ್ತಿತ್ತು. ಇದಕ್ಕೆ ಕನ್ನಡಿಗರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಗೂಗಲ್ ಕನ್ನಡಿಗರ ಕ್ಷಮೆ ಯಾಚಿಸಿದೆ.
debtconsolidationsquad.com ಎಂಬ ವೆಬ್ ಪೇಜ್ನಲ್ಲಿ ಈ ರೀತಿಯಾಗಿ ಕಾಣಿಸಿಕೊಂಡಿತ್ತು. ಇದಕ್ಕೆ ವಿರೋಧಿಸಿದ ಕನ್ನಡಿಗರು ಪೇಜ್ ಅನ್ನು ರಿಪೋರ್ಟ್ ಮಾಡಿ. ಗೂಗಲ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದರು.
ತಕ್ಷಣ ಗೂಗಲ್ ಆ ವೆಬ್ ಪೇಜ್ ಅನ್ನು ತೆಗೆದುಹಾಕಿದ್ದು, ಇದೀಗ ಕ್ಷಮೆ ಕೂಡಾ ಯಾಚಿಸಿದೆ. ಗೂಗಲ್ನ ಈ ಪ್ರಮಾದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ, ಸಂಸದ ಪಿಸಿ ಮೋಹನ್ ಸೇರಿದಂತೆ ಅನೇಕ ರಾಜಕಾರಣಿಗಳು, ನಟ-ನಟಿಯರು, ಕನ್ನಡ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದರು.
ಗೂಗಲ್ ಕಂಪನಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕನ್ನಡ ಪರ ಸಂಘಟನೆ ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ದೂರು ಸಹ ನೀಡಿತ್ತು.
('ಕನ್ನಡ ಭಾಷೆ ವಿಶ್ವ ಲಿಪಿಗಳ ರಾಣಿ'.. ಗೂಗಲ್ ಸರ್ಚ್ನಲ್ಲಿ ನಂ.1 ಡಿಸ್ಪ್ಲೇ, twitterನಲ್ಲೂ ಟ್ರೆಂಡಿಂಗ್)