ಬೆಂಗಳೂರು:ಚಾಲಕನ ನಿಯಂತ್ರಣ ತಪ್ಪಿ ಸರಕು ಸಾಗಣೆ ವಾಹನ ಮಗುಚಿ ಬಿದ್ದಿರುವ ಘಟನೆ ಬನಶಂಕರಿ ದೇವಾಲಯದ ಬಳಿ ನಡೆದಿದೆ.
ಸರಕು ಸಾಗಣೆ ವಾಹನ ಪಲ್ಟಿ... ಪಾದಚಾರಿಗೆ ಗಂಭೀರ ಗಾಯ - ಚಾಲಕನ ನಿಯಂತ್ರಣ ತಪ್ಪಿ ಸರಕು ಸಾಗಣೆ ವಾಹನ ಪಲ್ಟಿ ನ್ಯೂಸ್
ಚಾಲಕನ ನಿಯಂತ್ರಣ ತಪ್ಪಿ ಸರಕು ಸಾಗಣೆ ವಾಹನ ಪಲ್ಟಿಯಾಗಿ ಬಿದ್ದ ಪರಿಣಾಮ ಪಾದಚಾರಿ ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರಲ್ಲಿ ಈ ಘಟನೆ ನಡೆದಿದೆ.
ಸರಕು ಸಾಗಣೆ ವಾಹನ ಪಲ್ಟಿ
ವಾಹನ ಪಲ್ಟಿ ಹೊಡೆದ ಕಾರಣ ರಸ್ತೆ ಬದಿ ತೆರಳುತ್ತಿದ್ದ ಪಾದಚಾರಿ ವಯೋವೃದ್ಧನ ಮೇಲೆ ವಾಹನ ಬಿದ್ದಿದ್ದು, ವೃದ್ಧನ ಸ್ಥಿತಿ ಗಂಭೀರವಾಗಿದೆ. ಹಾಗೆ ಸರಕು ಸಾಗಣೆ ವಾಹನದ ಚಾಲಕನಿಗೂ ಗಾಯಗಳಾಗಿವೆ.
ಈ ವಿಷಯ ತಿಳಿದು ಜಯನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿದೆ.