ಕರ್ನಾಟಕ

karnataka

ETV Bharat / state

ತಾಯಿ ಎದುರೇ ಬಾಲಕಿ ಮೇಲೆ ಹರಿದ ಗೂಡ್ಸ್​ ಆಟೋ.. ಚಿಕಿತ್ಸೆ ಫಲಿಸದೇ ಕಂದಮ್ಮ ಸಾವು- ವಿಡಿಯೋ - ಬೆಂಗಳೂರಿನಲ್ಲಿ ಲಗೇಜ್ ಆಟೋ ಹರಿದು ತಾಯಿ ಕಣ್ಣೆದುರೆ ಬಾಲಕಿ ಸಾವು

ಗೂಡ್ಸ್​​ ಆಟೋ ಚಾಲಕನ ನಿರ್ಲಕ್ಷ್ಯಕ್ಕೆ ಪುಟ್ಟ ಬಾಲಕಿ ಬಲಿಯಾಗಿರುವ ಘಟನೆ ಕಾಮಾಕ್ಷಿಪಾಳ್ಯದ ಕಾವೇರಿಪುರದಲ್ಲಿ ನಡೆದಿದೆ.

ಲಗೇಜ್ ಆಟೋ ಹರಿದು ತಾಯಿ ಕಣ್ಣೆದುರೆ ಬಾಲಕಿ ಸಾವು
ಲಗೇಜ್ ಆಟೋ ಹರಿದು ತಾಯಿ ಕಣ್ಣೆದುರೆ ಬಾಲಕಿ ಸಾವು

By

Published : Mar 19, 2022, 5:33 PM IST

ಬೆಂಗಳೂರ: ಚಾಲಕನ ನಿರ್ಲಕ್ಷ್ಯದಿಂದ ಗೂಡ್ಸ್​ ಆಟೋ ಹರಿದು 4 ವರ್ಷದ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಮಾ.17ರಂದು ಕಾಮಾಕ್ಷಿಪಾಳ್ಯದ ಕಾವೇರಿಪುರದಲ್ಲಿ ನಡೆದಿದೆ. ಮೃತ ಬಾಲಕಿಯನ್ನ ಭುವನ (4) ಎಂದು ಗುರುತಿಸಲಾಗಿದೆ.

ಗೂಡ್ಸ್​ ಆಟೋ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಸಾವು

ಬಾಲಕಿ ತಾಯಿಯೊಂದಿಗೆ ರಸ್ತೆಯಲ್ಲಿ ಎಳನೀರು ಕುಡಿಯುತ್ತಿದ್ದಾಗ ಪಕ್ಕದಲ್ಲೇ ನಿಂತಿದ್ದ ಗ್ಯಾಸ್ ಸಿಲಿಂಡರ್ ತುಂಬಿದ್ದ ಆಟೋ ಹರಿದಿದೆ. ಗೂಡ್ಸ್​ ಆಟೋದಿಂದ ಚಾಲಕ ಕೆಳಕ್ಕಿಳಿಯುವಾಗ, ಹ್ಯಾಂಡ್ ಬ್ರೇಕ್ ಹಾಕದೆ ಆಟೋದಿಂದ ಇಳಿದಿದ್ದರಿಂದ ರಸ್ತೆ ಇಳಿಜಾರಿನಲ್ಲಿ ಆಟೋ ಮುಂದಕ್ಕೆ ಚಲಿಸಿದೆ.

ಬಾಲಕಿಯನ್ನ ಬಚಾವ್ ಮಾಡಲು ತಾಯಿ ಪ್ರಯತ್ನಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ತಾಯಿಯ ಕಣ್ಣ ಮುಂದೆಯೇ ಮಗುವಿನ ಮೇಲೆ ಆಟೋ ಹರಿದಿದೆ. ಕೂಡಲೇ ಆಟೋ ಚಾಲಕ ತಾನೇ ಮಗುವನ್ನ ಆಸ್ಪತ್ರೆಗೆ ಸಾಗಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.

ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ‌ ಸೆರೆಯಾಗಿದ್ದು, ಕಾಮಾಕ್ಷಿಪಾಳ್ಯ ಸಂಚಾರಿ ಠಾಣಾ ಪೊಲೀಸರು ಆರೋಪಿ ಚಾಲಕ ಧನಂಜಯನನ್ನ ಬಂಧಿಸಿದ್ದಾರೆ.

For All Latest Updates

ABOUT THE AUTHOR

...view details