ಡಿಸಿಪಿ ಸಿ.ಕೆ.ಬಾಬಾ, ಡಿಸಿಪಿ ಆಗ್ನೇಯ ವಿಭಾಗದ ಬೆಂಗಳೂರು: ನಗರ ಆಗ್ನೇಯ ವಿಭಾಗದ ಪೊಲೀಸ್ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕಳೆದೊಂದು ತಿಂಗಳ ಹಿಂದೆ ಜಾರಿಗೆ ತಂದಿರುವ ಕ್ಯೂ ಆರ್ ಕೋಡ್ ಸಿಸ್ಟಂಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪೊಲೀಸ್ ಸಿಬ್ಬಂದಿ ನಡವಳಿಕೆಯಲ್ಲಿ ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಒಳ್ಳೆಯ ರೇಟಿಂಗ್ ಪಡೆದುಕೊಂಡ ಸಿಬ್ಬಂದಿಗೆ ಪ್ರವಾಸ, ಸಿನಿಮಾ ಹಾಗೂ ಗಿಫ್ಟ್ ನೀಡುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ.
ಕಳೆದ ತಿಂಗಳು 28ರಂದು ಆಗ್ನೇಯ ವಿಭಾಗ ವ್ಯಾಪ್ತಿಯಲ್ಲಿ ಬರುವ 13 ಪೊಲೀಸ್ ಠಾಣೆಗಳಲ್ಲಿ ದರ್ಪಣ ಹೆಸರಿನ ಅಪ್ಲಿಕೇಷನ್ ಜಾರಿ ತಂದಿದ್ದು, ಠಾಣೆಗೆ ಬರುವವರೊಂದಿಗೆ ಪೊಲೀಸ್ ಸಿಬ್ಬಂದಿ ಜೊತೆ ನಡವಳಿಕೆ ತೋರಿ ಫೈವ್ ಸ್ಟಾರ್ ರೇಟಿಂಗ್ ಪಡೆದವರಿಗೆ ಆಕರ್ಷಕ ರೀತಿಯ ಗಿಫ್ಟ್, ಪ್ರವಾಸಕ್ಕೆ ಕಳುಹಿಸಲಾಗಿದೆ.
ಈವರೆಗೆ 3484 ಮಂದಿ ಭೇಟಿ ಕೊಟ್ಟಿದ್ದು 2771 ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2340 ಜನರು ಫೈವ್ ಸ್ಟಾರ್ ರೇಟಿಂಗ್ ನೀಡಿದ್ದಾರೆ. 55 ಮಂದಿ ಫೋರ್ ಸ್ಟಾರ್ ನೀಡಿದರೆ ಇನ್ನುಳಿದವರು ಕಡಿಮೆ ಸ್ಟಾರ್ ನೀಡಿದ್ದಾರೆ. ಯಾವ ಠಾಣೆಯಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದುಕೊಂಡಿದ್ದಾರೋ ಆ ಠಾಣಾ ಸಿಬ್ಬಂದಿಯನ್ನು ಪ್ರವಾಸಕ್ಕೆ ಕಳುಹಿಸಲಾಗಿದೆ.
ಮೂವರು ಸಿಬ್ಬಂದಿ ಹಾಗೂ ಕುಟುಂಬದವರನ್ನು ಕೊಡಗಿನ ರೆಸಾರ್ಟ್ಗೆ ಕಳುಹಿಸಲಾಗಿದೆ. ಐವರನ್ನು ಸಿನಿಮಾಕ್ಕೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ನಡವಳಿಕೆ ತೋರುವವರಿಗೆ ಗಿಫ್ಟ್ ನೀಡಲಾಗುವುದು ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಪ್ರೋತ್ಸಾಹದ ಮಾತುಗಳ್ನನಾಡಿದ್ದಾರೆ.
ಇದನ್ನೂ ಓದಿ:ಇನ್ಸ್ಟಾಗ್ರಾಮ್ನಲ್ಲಿ ಲವ್, ಮುತ್ತಿನಗರಿಯಲ್ಲಿ ಮದುವೆ.. ಮೊಹಬತ್ ಕೊಪ್ಪಳ ಟು ಹೈದರಾಬಾದ್..!