ಬೆಂಗಳೂರು: ಟ್ರಾಫಿಕ್ ದಂಡ ಕಟ್ಟಿ ಸುಸ್ತಾಗ್ತಿದ್ದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಟ್ರಾಫಿಕ್ ದಂಡ ಮೊತ್ತ ಇಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಡ್ರಿಂಕ್ ಅಂಡ್ ಡ್ರೈವ್ಗೆ 10 ಸಾವಿರ ರೂ. ದಂಡ ಯಥಾಸ್ಥಿತಿ ಮುಂದುವರೆದಿದ್ದು, ದಂಡದ ಮೊತ್ತದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ವಾಹನ ಸವಾರರಿಗೆ ಗುಡ್ ನ್ಯೂಸ್ ಹೆಲ್ಮೆಟ್ ರಹಿತ ಪ್ರಯಾಣದ ದಂಡ 1000ದಿಂದ 500 ರೂ.ಗೆ ಇಳಿಕೆಯಾಗಿದೆ. ಹೊಸ ನಿಯಮದಂತೆ ಲೈಸೆನ್ಸ್ ಇಲದಿದ್ದರೆ ವಿಧಿಸಲಾಗಿದ್ದ 10 ಸಾವಿರ ಬದಲು ಬೈಕ್ ಸವಾರರಿಗೆ 1 ಸಾವಿರ, ಕಾರ್ ಚಾಲಕರಿಗೆ 2 ಸಾವಿರ ರೂ. ಮಿತಿ ಮೀರಿದ ವೇಗದ ಚಾಲನೆಗೆ 10 ರಿಂದ 5 ಸಾವಿರಕ್ಕೆ ಇಳಿಸಲಾಗಿದೆ.
ವಾಹನ ಸವಾರರಿಗೆ ಗುಡ್ ನ್ಯೂಸ್ ನೋಂದಣಿ ಇಲ್ಲದ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ 2 ಸಾವಿರ ರೂ. ದಂಡ ಮತ್ತು ನೋಂದಣಿ ಇಲ್ಲದ ಲಘು ವಾಹನಗಳಿಗೆ 3 ಸಾವಿರ ಹಾಗು ನೋಂದಣಿ ಇಲ್ಲದ ಭಾರಿ ವಾಹನಗಳಿಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಪರವಾನಗಿ ಇಲ್ಲದ ವಾಹನಗಳ ದಂಡ 10 ರಿಂದ 5 ಸಾವಿರಕ್ಕೆ ಇಳಿಸಿ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಈ ಬಗ್ಗೆ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾತನಾಡಿ, ಪರಿಷ್ಕೃತ ಸಂಚಾರ ದಂಡ ಇಳಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದೇಶದ ಪ್ರತಿ ತಲುಪಿದೆ. ಈಗಾಗಲೇ ನಗರದ 44 ಸಂಚಾರಿ ಠಾಣಾ ಇನ್ಸ್ಪೆಕ್ಟರ್ಗಳಿಗೆ ಪರಿಷ್ಕೃತ ಆದೇಶದ ಬಗ್ಗೆ ತಿಳಿಸಿದ್ದೇವೆ. ದಂಡ ಕಡಿಮೆ ಅಥವಾ ಜಾಸ್ತಿಯಾಗಲಿ ಸಂಚಾರಿ ನಿಯಮ ಪಾಲಿಸಿ ಎಂದು ವಾಹನ ಸವಾರರಲ್ಲಿ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ.