ಬೆಂಗಳೂರು: ನಮ್ಮ ಮೆಟ್ರೋ ನಿಗಮದ ಕಾಮಗಾರಿ ಹಂತ ಹಂತವಾಗಿ ಮುಗಿಯುತ್ತಿದ್ದು, ಇದೀಗ ನಿಗಮವು ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಲು ಸಜ್ಜಾಗಿದೆ. ಇದೇ ವರ್ಷ ಎರಡು ಮಾರ್ಗಗಳು ಮೆಟ್ರೋ ಓಡಾಟಕ್ಕೆ ಸಿದ್ಧವಾಗಲಿವೆ.
ನಮ್ಮ ಮೆಟ್ರೋ ಹಸಿರು ಮಾರ್ಗವಾದ ಯಲಚೇನಹಳ್ಳಿ ಟು ಅಂಜನಾಪುರ ಮಾರ್ಗದವರೆಗೆ ಕಾಮಗಾರಿ ಪೂರ್ಣಗೊಂಡಿದ್ದು, ಪರೀಕ್ಷಾರ್ಥ ಸಂಚಾರಕ್ಕೆ ತಯಾರಿ ನಡೆಸಲಾಗಿದೆ. ಮೂರು ತಿಂಗಳ ಪರೀಕ್ಷಾರ್ಥ ನಡೆಸಿದ ಬಳಿಕ ರೈಲ್ವೇ ಇಲಾಖೆ ಆಯುಕ್ತರ ಪರಿಶೀಲನೆ ನಡೆಸಿ ಸಕ್ಸಸ್ ಆದರೆ ನಂತರ ವಾಣಿಜ್ಯ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತೆ.
2019ರ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತ ಮಾಡಬೇಕೆಂಬ ಗುರಿ ಇತ್ತು. ಪರೀಕ್ಷಾರ್ಥ ಸಂಚಾರವೂ ಈ ಆಗಸ್ಟ್ನಲ್ಲೇ ಆಗಬೇಕಿತ್ತು. ಆದರೆ ಕೊರೊನಾ ಕಾಲಿಟ್ಟ ಗಳಿಗೆಯಿಂದಾಗಿ ಎಲ್ಲವೂ ಮುಂದೂಡಲಾಯಿತು. ಹೀಗಾಗಿ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದವು. ಆದರೆ ಈಗ ಒಂದೊಂದೇ ಕಾಮಗಾರಿ ಪೂರ್ಣಗೊಂಡಿದೆ. 2016ರಲ್ಲಿ ಶುರುವಾದ ಯಲಚೇನಹಳ್ಳಿ- ಅಂಜನಾಪುರ ನಡುವಿನ 6.29 ಕಿಮೀ ಮಾರ್ಗ ಇದಾಗಿದ್ದು, ಸುಮಾರು 500 ಕೋಟಿ ವೆಚ್ಚದ ಕಾಮಗಾರಿಯಾಗಿದೆ. ಈ ಮಾರ್ಗದಲ್ಲಿ ಐದು ನಿಲ್ದಾಣಗಳು ಬರಲಿದ್ದು, ಕೋಣನಕುಂಟೆ ಕ್ರಾಸ್, ಕೃಷ್ಣ ಲೀಲಾ ಪಾರ್ಕ್, ವಜರಹಳ್ಳಿ, ತಲಘಟ್ಟಪುರ, ಅಂಜನಾಪುರ ಟೌನ್ ಶಿಪ್ ಬರಲಿದೆ.