ಬೆಂಗಳೂರು: ಪಿಎಸ್ಐ ಪರೀಕ್ಷಾ ನೇಮಕಾತಿ ಅಕ್ರಮ ಸಿಐಡಿ ತನಿಖೆ ಬೆನ್ನಲ್ಲೇ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಪರೀಕ್ಷೆ ನಡೆಯುವ ಕೆಲವೇ ಗಂಟೆಗಳ ಹಿಂದೆ ವಾಟ್ಸ್ಆ್ಯಪ್ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಗುಮಾನಿ ವ್ಯಕ್ತವಾಗಿದೆ. ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದೆ.
ನಿರ್ದಿಷ್ಟ ಪತ್ರಿಕೆಯ ಪ್ರಶ್ನೆಗಳು ಲೀಕ್ ಆಗಿದ್ವು ಎಂಬ ಆರೋಪ ಕೇಳಿ ಬಂದಿದೆ. ಪರೀಕ್ಷೆ ಮುನ್ನವೇ ಅಭ್ಯರ್ಥಿಗಳ ಮೊಬೈಲ್ನಲ್ಲಿ ಪ್ರಶ್ನೆಗಳು ಹರಿದಾಡಿವೆ ಎನ್ನಲಾದ ಸ್ಕ್ರೀನ್ ಶಾಟ್ ವೈರಲ್ ಆಗಿದೆ. 20ಕ್ಕೂ ಹೆಚ್ಚು ಪ್ರಶ್ನೆಗಳು ಅಭ್ಯರ್ಥಿಯೊಬ್ಬನ ಮೊಬೈಲ್ನಲ್ಲಿ ನೋಡಿದ್ದಾಗಿ ಸ್ಪರ್ಧಾಕಾಂಕ್ಷಿ ಅಭ್ಯರ್ಥಿಗಳು ದೂರು ನೀಡಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಕೋವಿಡ್ ಉಲ್ಬಣ : 2,593 ಹೊಸ ಪ್ರಕರಣ ಪತ್ತೆ, 44 ಮಂದಿ ಸಾವು