ಕರ್ನಾಟಕ

karnataka

ETV Bharat / state

ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಆರೋಪಿ ಅರೆಸ್ಟ್​ - Gold theft case

ಮನೆಯವರು ಊರಿಗೆ ತೆರಳಿದ್ದ ಸಮಯದಲ್ಲಿ ಪಿಕಾಸಿಯಿಂದ ಮನೆ ಬಾಗಿಲು ಮುರಿದು ಚಿನ್ನಾಭರಣ ದೋಚಿದ್ದ ಮನೆಗಳ್ಳನನ್ನು ನಂದಿನಿ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.

Bengaluru
ಬಂಧಿತ ಆರೋಪಿ

By

Published : May 30, 2021, 8:15 AM IST

ಬೆಂಗಳೂರು:ಅಂಗಡಿ ಮಾಲೀಕ ಊರಿಗೆ ಹೋಗುವ ವಿಷಯ ತಿಳಿದು ಅವರ ಮನೆ ಬಾಗಿಲು ಮುರಿದು ಚಿನ್ನಾಭರಣ ದೋಚಿದ್ದ ಆರೋಪಿಯನ್ನು ನಂದಿನಿ ಲೇಔಟ್​ ಪೊಲೀಸರು ಬಂಧಿಸಿದ್ದಾರೆ.

ಸಿಗರೇಟ್​ ಖರೀದಿಗೆ ಬಂದು ಮನೆಗಳ್ಳತನ: ಆರೋಪಿ ಅರೆಸ್ಟ್

ದಿಲೀಪ್ ಅಲಿಯಾಸ್ ಕುಟ್ಟಿ ಬಂಧಿತ ಆರೋಪಿ. ಪ್ರಕರಣದಲ್ಲಿ ಸುಳಿವು ಕೊಟ್ಟು ಕಳ್ಳತನಕ್ಕೆ ದಾರಿ ಮಾಡಿಕೊಟ್ಟವನು ದೂರುದಾರನೇ ಆಗಿದ್ದಾನೆ. ಚೈನ್ ಸ್ಮೋಕರ್ ಆಗಿರುವ ಆರೋಪಿ, ಸಿಗರೇಟ್ ಕೊಳ್ಳಲು ಇವರ ಅಂಗಡಿಗೆ ಬಂದು ಹೋಗುತ್ತಿದ್ದ. ಈ ವೇಳೆ ಅಂಗಡಿ ಮಾಲೀಕರು, ಎರಡು ದಿನ ಊರಿಗೆ ಹೋಗುತ್ತಿದ್ದೇವೆ. ಅಗತ್ಯ ಇದ್ದರೆ ಹೆಚ್ಚಿನ ಸಿಗರೇಟ್​ ಖರೀದಿಸುವಂತೆ ಹೇಳಿದ್ದರು.

ಅಂಗಡಿ ಮಾಲೀಕ ಊರಿಗೆ ಹೋಗುತ್ತೇನೆ ಎಂದಿದ್ದೇ ತಡ ಆರೋಪಿ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದ. ರಾತ್ರಿ ವೇಳೆ ಲಗ್ಗೆರೆಯೆ ಪ್ರೀತಿನಗರದಲ್ಲಿರುವ ಮನೆಯಲ್ಲಿ ಪಿಕಾಸಿಯಿಂದ ಬಾಗಿಲಿನ ಲಾಕ್ ಮುರಿದು ಚಿನ್ನಾಭರಣ ದೋಚಿದ್ದ. ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಆರೋಪಿಯ ಕೃತ್ಯ ಬಯಲಿಗೆ ಬಂದಿದೆ.

ಸದ್ಯ ಬಂಧಿತ ಆರೋಪಿಯಿಂದ 8.5 ಲಕ್ಷ ರೂ. ಮೌಲ್ಯದ 194 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ABOUT THE AUTHOR

...view details