ಕರ್ನಾಟಕ

karnataka

ETV Bharat / state

Gold and Silver rate: ಚಿನ್ನ ಪ್ರಿಯರಿಗೆ ಗುಡ್​ ನ್ಯೂಸ್​.. ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ - silver rate

ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ- ಬಂಗಾರದ ಬೆಲೆಯಲ್ಲಿ ಎರಡು ದಿನಗಳಿಂದ ಭಾರಿ ಇಳಿಕೆ- ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ- ಬೆಳ್ಳಿ ದರದ ಮಾಹಿತಿ

Karnataka gold silver price
ಕರ್ನಾಟಕ ಚಿನ್ನ ಬೆಳ್ಳಿ ದರ

By

Published : Jul 7, 2022, 1:18 PM IST

ಬೆಂಗಳೂರು:ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯವಾಗಿರುತ್ತೆ. ಆದ್ರೆ ಕಳೆದ ಎರಡು ದಿನಗಳಿಂದ ಬಂಗಾರದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ರಾಜ್ಯದ ಕೆಲ ನಗರಗಳಲ್ಲಿ ಬಂಗಾರದ ಬೆಲೆ ಕಡಿಮೆಯಾಗಿದ್ದು, ನೀವಿಂದು ಚಿನ್ನಾಭರಣ ಖರೀದಿಸಬೇಕೆಂದುಕೊಂಡಿದ್ದರೆ, ನಿಮಗಿದು ಉತ್ತಮ ಸಮಯ..

ನಗರ ಚಿನ್ನ22K ಚಿನ್ನ24k ಬೆಳ್ಳಿ
ಬೆಂಗಳೂರು 4,710 5,095 57.2
ಮಂಗಳೂರು 4,788 5,115 62.40
ಹುಬ್ಬಳ್ಳಿ 4,741 5,172 58,100(ಕೆ.ಜಿ)
ಮೈಸೂರು 4,735 5,246 58.50
ದಾವಣಗೆರೆ 4,667 5,183 62.48

ಈ ಎಲ್ಲಾ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ ಇಳಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ 75 ರೂ.(ಪ್ರತಿ ಗ್ರಾಂ), 24K ಚಿನ್ನದ ಬೆಲೆಯಲ್ಲಿ 81 ರೂ. ಮತ್ತು ಬೆಳ್ಳಿ ಬೆಲೆಯಲ್ಲಿ 10 ಪೈಸೆ ಇಳಿಕೆ ಆಗಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ಬೆಲೆಯಲ್ಲಿ 75 ರೂ., 24K ಚಿನ್ನದ ಬೆಲೆಯಲ್ಲಿ 52 ರೂ. ಮತ್ತು ಒಂದು ಕೆ.ಜಿ ಬೆಳ್ಳಿ ಬೆಲೆಯಲ್ಲಿ 140 ರೂ. ಇಳಿಕೆ ಆಗಿದೆ.

ಮೈಸೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ 70 ರೂ., 24K ಚಿನ್ನದ ಬೆಲೆಯಲ್ಲಿ 78 ರೂ. ಇಳಿಕೆ ಕಂಡಿದೆ. ದಾವಣಗೆರೆಯಲ್ಲಿ 22K ಚಿನ್ನದ ಬೆಲೆಯಲ್ಲಿ 120 ರೂ., 24K ಚಿನ್ನದ ಬೆಲೆಯಲ್ಲಿ 128 ರೂ. ಮತ್ತು ಬೆಳ್ಳಿ ಬೆಲೆಯಲ್ಲಿ 2 ರೂ. ಇಳಿಕೆ ಆಗಿದೆ.

ಇದನ್ನೂ ಓದಿ:ಮಾರುಕಟ್ಟೆ ಮಾಹಿತಿ.. ಇಂದು ತರಕಾರಿ, ಹಣ್ಣುಗಳಲ್ಲಿ ಯಾವುದು ದುಬಾರಿ, ಯಾವುದು ಅಗ್ಗ?

ABOUT THE AUTHOR

...view details