ಕರ್ನಾಟಕ

karnataka

ETV Bharat / state

ರಾಜ್ಯದ ಯಾವ ನಗರಗಳಲ್ಲಿ ಬಂಗಾರ- ಬೆಳ್ಳಿ ದರ ಎಷ್ಟು? - ಕರ್ನಾಟಕ ಚಿನ್ನ ಬೆಲೆ

ಇಂದಿನ ಚಿನ್ನ ಬೆಳ್ಳಿ ದರ ಈ ರೀತಿಯಾಗಿದೆ. ಕೆಲ ನಗರಗಳಲ್ಲಿ ಬೆಲೆ ಏರಿಕೆಯಾಗಿದ್ದರೆ, ಕೆಲವೆಡೆ ಇಳಿಕೆಯಾಗಿದೆ.

gold silver price today
ಕರ್ನಾಟಕ ಚಿನ್ನ ಬೆಳ್ಳಿ ದರ

By

Published : Jun 23, 2022, 12:06 PM IST

Updated : Jun 23, 2022, 12:52 PM IST

ಬೆಂಗಳೂರು: ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಕಾಣುತ್ತೇವೆ. ದಿನೇ ದಿನೆ ಬೆಲೆಯಲ್ಲಿ ವ್ಯತ್ಯಾಸವಾದರೂ, ದರ ಗಗನಕ್ಕೇರಿದರೂ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ನೀವು ಇಂದು ಚಿನ್ನ ಬೆಳ್ಳಿ ಖರೀದಿಸುವವರಿದ್ದರೆ ಇಂದಿನ ಬೆಲೆ ಈ ರಿತಿ ಇದೆ ನೋಡಿ.

ಎಲ್ಲೆಲ್ಲಿ ಏರಿಕೆ?ಬೆಂಗಳೂರಿನಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ-5,125 ರೂ. ಇದ್ದರೆ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದ್ದು ಪ್ರತಿ ಗ್ರಾಂಗೆ 60.8 ರೂ. ಇದೆ. ಮೈಸೂರಿನಲ್ಲಿ ಕೂಡ ಚಿನ್ನದ ದರ ಸ್ವಲ್ಪ ಏರಿಕೆ ಕಂಡಿದೆ. 24 ಕ್ಯಾರೆಟ್ ಚಿನ್ನದ ಬೆಲೆ-5,255 ರೂ., 22 ಕ್ಯಾರೆಟ್ ಚಿನ್ನದ ಬೆಲೆ-4,745 ರೂ., ಮತ್ತು ಬೆಳ್ಳಿ-62.30 ರೂ. ಇದೆ.

ಎಲ್ಲೆಲ್ಲಿ ಇಳಿಕೆ?ಹುಬ್ಬಳ್ಳಿಯಲ್ಲಿ ಚಿನ್ನಾಭರಣ ಬೆಲೆ ಕೊಂಚ ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ-5,214 ರೂ., 22 ಕ್ಯಾರೆಟ್ ಚಿನ್ನದ ಬೆಲೆ-4,780 ರೂ., ಮತ್ತು ಬೆಳ್ಳಿ ಬೆಲೆ 62.1ರೂ. ಇದೆ. ಮಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ - 5,204ರೂ. ಇದ್ದು 24 ರೂ. ಇಳಿಕೆಯಾಗಿದೆ, 22 ಕ್ಯಾರೆಟ್ ಚಿನ್ನದ ಬೆಲೆ-4,770 ರೂ. ಇದ್ದು 20 ರೂ. ಇಳಿಕೆಯಾಗಿದೆ, ಮತ್ತು ಬೆಳ್ಳಿ ಬೆಲೆ 66ರೂ. ಇದೆ. ದಾವಣಗೆರೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ-5,145 ರೂ. ಇದ್ದು, 22 ಕ್ಯಾರೆಟ್ ಚಿನ್ನದ ಬೆಲೆ-4,760 ರೂ., ಮತ್ತು ಬೆಳ್ಳಿ ಬೆಲೆ 66.08 ರೂ. ಇದೆ.

ಶಿವಮೊಗ್ಗದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 4745 ರೂ, 24 ಕ್ಯಾರೆಟ್ ಚಿನ್ನದ ಬೆಲೆ 5102 ರೂ ಇದ್ದು, ಬೆಳ್ಳಿ ದರ 61.70 ರೂ ಇದೆ.

ಇದನ್ನೂ ಓದಿ:ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ

Last Updated : Jun 23, 2022, 12:52 PM IST

ABOUT THE AUTHOR

...view details