ಕರ್ನಾಟಕ

karnataka

ETV Bharat / state

2001ರ ‘10 ಗ್ರಾಂ’ ಬಂಗಾರ 2021ರ ‘1 ಗ್ರಾಂ’ ಚಿನ್ನಕ್ಕೆ ಸಮ - Gold rate in 2001

ಕಳೆದ ದಶಕದಿಂದಲೂ ದಿನೇದಿನೆ ಚಿನ್ನದ ಬೆಲೆ ಏರುತ್ತಿದೆ. ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22k ಚಿನ್ನ ₹4475 ಹಾಗೂ 24k ಚಿನ್ನ ₹4882 ಇದೆ. ಒಂದು ದಶಕದ ಹಿಂದೆ 2001ರಲ್ಲಿ 10 ಗ್ರಾಂ ಸುಮಾರು ₹4,300 ಇತ್ತು. ಹೀಗಾಗಿ, ಅನೇಕ ಹೂಡಿಕೆ ತಜ್ಞರು ಚಿನ್ನದ ಮೇಲೆ ಹೂಡಿಕೆ ಮಾಡಲು ಸಲಹೆ ನೀಡುತ್ತಾರೆ..

Bangalore gold rate news
2001 ರ ‘10 ಗ್ರಾಂ’ ಬಂಗಾರ 2021ರ ‘1 ಗ್ರಾಂ’ ಚಿನ್ನಕ್ಕೆ ಸಮ.!

By

Published : Jul 10, 2021, 7:05 PM IST

Updated : Jul 12, 2021, 7:25 PM IST

ಬೆಂಗಳೂರು :ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಚಿನ್ನಾಭರಣ ಖರೀದಿ ಸುಧಾರಣೆ ಆಗುತ್ತಿದೆ. ಜನರ ಶಕ್ತ್ಯಾನುಸಾರ ಬಂಗಾರ ಖರೀದಿ ಮಾಡುತ್ತಿದ್ದಾರೆ ಎಂದು ಬೆಂಗಳೂರು ಚಿನ್ನಾಭರಣ ಅಂಗಡಿಗಳ ಮಾಲೀಕರ ಸಂಘದ ಅಧ್ಯಕ್ಷ ರವಿಕುಮಾರ್ ಹೇಳಿದರು.

ಚಿನ್ನಾಭರಣ ಅಂಗಡಿಗಳ ಮಾಲೀಕರ ಸಂಘದ ಅಧ್ಯಕ್ಷ ರವಿಕುಮಾರ್

ಚಿನ್ನಾಭರಣ ಕೇವಲ ತೋರ್ಪಡಿಕೆಗೆ ಮಾತ್ರ ಸೀಮಿತವಾಗದೆ ಹೂಡಿಕೆ ಮಾಡಲು ಜನರು ಇಷ್ಟ ಪಡುತ್ತಾರೆ. ಯಾರೂ ಚಿನ್ನದ ಮೇಲೆ ಹೂಡಿಕೆ ಮಾಡಿ ಕೆಟ್ಟವರಿಲ್ಲ. ಇದಲ್ಲದೆ ಚಿನ್ನ ಯಾವ ಬೆಲೆಗೆ ಖರೀದಿ ಮಾಡಿದ್ರೂ ಲಾಭವನ್ನೇ ನೀಡುತ್ತದೆ ಎಂದರು.

ಕಳೆದ ದಶಕದಿಂದಲೂ ದಿನೇದಿನೆ ಚಿನ್ನದ ಬೆಲೆ ಏರುತ್ತಿದೆ. ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22k ಚಿನ್ನ ₹4475 ಹಾಗೂ 24k ಚಿನ್ನ ₹4882 ಇದೆ. ಒಂದು ದಶಕದ ಹಿಂದೆ 2001ರಲ್ಲಿ 10 ಗ್ರಾಂ ಸುಮಾರು ₹4,300 ಇತ್ತು. ಹೀಗಾಗಿ, ಅನೇಕ ಹೂಡಿಕೆ ತಜ್ಞರು ಚಿನ್ನದ ಮೇಲೆ ಹೂಡಿಕೆ ಮಾಡಲು ಸಲಹೆ ನೀಡುತ್ತಾರೆ.

Last Updated : Jul 12, 2021, 7:25 PM IST

ABOUT THE AUTHOR

...view details