ಬೆಂಗಳೂರು: ಮನೆ ಮಂದಿ ಮಲಗಿದ್ದ ವೇಳೆ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.
ಮನೆ ಮಂದಿ ಮಲಗೋದನ್ನೆ ಕಾಯುತ್ತಿದ್ದ ಕಳ್ಳರು... ಚಿನ್ನಾಭರಣ ಕದ್ದು ಪರಾರಿ - mobile and other valuables material Theft
ಮನೆ ಮಂದಿ ಮಲಗಿದ್ದ ವೇಳೆಯಲ್ಲಿಯೇ ಖದೀಮರು ತಮ್ಮ ಕೈಚಕ ತೋರಿಸಿದ್ದು, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.
![ಮನೆ ಮಂದಿ ಮಲಗೋದನ್ನೆ ಕಾಯುತ್ತಿದ್ದ ಕಳ್ಳರು... ಚಿನ್ನಾಭರಣ ಕದ್ದು ಪರಾರಿ mobile and other valuables material Theft at Bangalore](https://etvbharatimages.akamaized.net/etvbharat/prod-images/768-512-5312093-thumbnail-3x2-bng.jpg)
ಬಾಣಸವಾಡಿಯ ಸುಬ್ಬಯ್ಯಪಾಳ್ಯದ ಇಂದಿರಾ ಸ್ಟ್ರೀಟ್‌ನಲ್ಲಿ ವಾಸಿಸುತ್ತಿರುವ ಪ್ರೇಮ್‌ಕುಮಾರ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಡಿ.6ರಂದು ಪ್ರೇಮ್ ಕುಮಾರ್ ತಮ್ಮ ಕುಟುಂಬದವರ ಜೊತೆ ಹೋಟೆಲ್‌ಗೆ ಹೋಗಿ ಊಟ ಮಾಡಿಕೊಂಡು ಬಂದು ಮನೆಯಲ್ಲಿ ಮಲಗಿದ್ದರು. ಆ ವೇಳೆ ಬಂದ ಕಳ್ಳರು ಮನೆಯಲ್ಲಿದ್ದ 16 ಗ್ರಾಂ ಚಿನ್ನದ ಸರ, ಮೊಬೈಲ್ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಕಳ್ಳತನ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆ ಹಿನ್ನೆಲೆ ಪ್ರೇಮ್‌ಕುಮಾರ್ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ಆಧಾರದ ಮೇಲೆ ಪೊಲೀಸರು ಪತ್ತೆಕಾರ್ಯ ಮುಂದುವರೆಸಿದ್ದಾರೆ.
TAGGED:
Bangalore news