ಬೆಂಗಳೂರು: ಯಲಹಂಕದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿನ ಕಲೆ ನಾಗರಿಕರು ಮುಂದಾಗಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ನೋಡ ಬನ್ನಿ 'ನಮ್ಮೂರ ಮಹಾದೇವ'ನ... 31 ಕೆರೆಗಳ ಮಣ್ಣಿಂದ 11 ಅಡಿ ಎತ್ತರದ ಶಿಲಿಂಗ ನಿರ್ಮಾಣ - ಯಲಹಂಕದಲ್ಲಿ ಶಿವರಾತ್ರಿ ವಿಶೇಷ
ಜಲ ಸಂರಂಕ್ಷಣೆ, ಕೆರೆಗಳಿಗೆ ಕಾಯಕಲ್ಪ ನೀಡಲು ಹಾಗೂ ಜಲ ಸಂರಕ್ಷಣೆ ಬಗ್ಗೆ ಜನ ಜಾಗೃತಿ ಮೂಡಿಸಲು ಯಲಹಂಕದಲ್ಲಿ ವಿಶಿಷ್ಟವಾಗಿ ಮಹಾಶಿವರಾತ್ರಿ ಹಬ್ಬ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ.
![ನೋಡ ಬನ್ನಿ 'ನಮ್ಮೂರ ಮಹಾದೇವ'ನ... 31 ಕೆರೆಗಳ ಮಣ್ಣಿಂದ 11 ಅಡಿ ಎತ್ತರದ ಶಿಲಿಂಗ ನಿರ್ಮಾಣ god-nammura-mahadev](https://etvbharatimages.akamaized.net/etvbharat/prod-images/768-512-6146132-thumbnail-3x2-dr.jpg)
ತಾಲೂಕಿನ 31 ಕೆರೆಗಳಿಂದ ಮಣ್ಣು ತಂದು 11 ಅಡಿ ಶಿವಲಿಂಗ ನಿರ್ಮಿಸುವುದರ ಜೊತೆಗೆ ಕಾಶಿಯಿಂದ ಸ್ಫಟಿಕ ಲಿಂಗ ತಂದು ಪ್ರತಿಷ್ಠಾಪಿಸಿ 'ನಮ್ಮೂರ ಮಹಾದೇವ' ಎಂಬ ಶೀರ್ಷಿಕೆಯಡಿ ಶಿವರಾತ್ರಿ ಆಚರಣೆ ಮಾಡಲು ಸಿದ್ಧವಾಗುತ್ತಿದ್ದಾರೆ. ಸ್ಫಟಿಕ ಲಿಂಗಕ್ಕೆ ನಾನಾ ಊರುಗಳಿಂದ ತಂದ ಜಲಾಭಿಷೇಕ, ಮಹಾರುದ್ರಾಭಿಷೇಕ, ವಿಶೇಷ ಪೂಜೆ, ಅರ್ಚನೆ ಭಕ್ತಿಗೀತೆಗಳ ಸಂಗೀತ ಕಾರ್ಯಕ್ರಮ ಮಹಾಶಿವರಾತ್ರಿಯಂದು ಜರುಗಲಿದೆ.
ತಾಲೂಕು ಆಡಳಿತ, ಯಲಹಂಕ ಕಸಾಪ, ಬಿಬಿಎಂಪಿ, ಜಲಸಿರಿ ಪ್ರತಿಷ್ಠಾನ, ಹಿರಿಯ ನಾಗರೀಕರ ವೇದಿಕೆ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಯಲಹಂಕ ಕಸಾಪ ಅಧ್ಯಕ್ಷ ಎಸ್.ಎಲ್.ಎನ್ ಸ್ವಾಮಿ, ಜಲಸಿರಿ ಪ್ರತಿಷ್ಠಾನ ಅಧ್ಯಕ್ಷ ಅ.ಬ.ಶಿವಕುಮಾರ್ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.