ಬೆಂಗಳೂರು:ಉತ್ತರಪ್ರದೇಶದಲ್ಲಿ ಹೂಡಿಕೆ ಮಾಡಿ. ನಮ್ಮಲ್ಲಿ ಸಾಕಷ್ಟು ಅವಕಾಶವಿದೆ ಎಂದು ಅಲ್ಲಿನ ಎಂಎಸ್ಎಂಇ ಸಚಿವ ಸಿದ್ದಾರ್ಥನಾಥ್ ಸಿಂಗ್ ನಗರದಲ್ಲಿ ನಡೆಯುತ್ತಿರುವ ಜಿಇಎಸ್ 2019ರಲ್ಲಿ ಹೇಳಿದರು.
ಉತ್ತರಪ್ರದೇಶದಲ್ಲಿ ಹೂಡಿಕೆ ಮಾಡಿ: ಜಿಇಎಸ್ನಲ್ಲಿ ಯುಪಿ ಸಚಿವ ಮನವಿ - ಗ್ಲೋಬಲ್ ಎಕ್ಸಿಬಿಷನ್ ಆನ್ ಸರ್ವಿಸಸ್ 2019
ಬೆಂಗಳೂರಿನಲ್ಲಿ ನಡೆಯುತ್ತಿರುವ ಗ್ಲೋಬಲ್ ಎಕ್ಸಿಬಿಷನ್ ಆನ್ ಸರ್ವಿಸಸ್ 2019ರ ಕೊನೆಯ ದಿನವಾದ ಇಂದು ಯುಪಿ ಹೂಡಿಕೆಗೆ ವಿಡಿಯೋ ಬಿಡುಗಡೆ ಮಾಡಲಾಯಿತು.
![ಉತ್ತರಪ್ರದೇಶದಲ್ಲಿ ಹೂಡಿಕೆ ಮಾಡಿ: ಜಿಇಎಸ್ನಲ್ಲಿ ಯುಪಿ ಸಚಿವ ಮನವಿ ಸಚಿವ ಬೇಡಿಕೆ](https://etvbharatimages.akamaized.net/etvbharat/prod-images/768-512-5204801-thumbnail-3x2-sfgh.jpg)
ಸಚಿವ ಬೇಡಿಕೆ
ಉತ್ತರಪ್ರದೇಶದಲ್ಲಿ ಹೂಡಿಕೆ ಮಾಡಿ ಎಂದು ಯುಪಿ ಸಚಿವ ಜಿಇಎಸ್ನಲ್ಲಿ ಬೇಡಿಕೆ
ಉತ್ತರಪ್ರದೇಶದಲ್ಲಿ ಐಟಿ/ಬಿಟಿ ಕ್ಷೇತ್ರಗಳು ಬೆಳೆಯುತ್ತಿವೆ. ಜೊತೆಗೆ ಐಐಟಿ, ಐಐಎಂನಂತಹ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಸಹ ಯುಪಿನಲ್ಲಿವೆ. ಇವೆಲ್ಲವೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಮಾರ್ಗರ್ಶನದಲ್ಲಿ ಪ್ರಗತಿ ಕಾಣುತ್ತಿವೆ. ಇಷ್ಟಲ್ಲದೆ ತಾಜ್ ಮಹಲ್, ಲಕ್ನೌನಂತಹ ಪ್ರವಾಸಿ ಕ್ಷೇತ್ರಗಳು ರಾಜ್ಯದಲ್ಲಿ ಇವೆ. ದೇಶದ 16% ಜನಸಂಖ್ಯೆಯನ್ನ ಯುಪಿ ರಾಜ್ಯ ಹೊಂದಿದೆ. ಇದರಿಂದ ದೇಶದ ಆರ್ಥಿಕ ಬೆಳವಣಿಗೆಗೆ ಯುಪಿ ಮುಖ್ಯ ಪಾತ್ರ ವಹಿಸಲಿದೆ ಎಂದು ಹೇಳಿದರು.