ಬೆಂಗಳೂರು: ಬಿಜೆಪಿ ಜನ ವಿರೋಧಿ ಅಭಿಪ್ರಾಯಗಳ ವಿರುದ್ಧ ನನ್ನ ನಿಲುವು ಇದೆ ಎಂದು ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ನಿವಾಸದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಾಹ್ಯ ಬೆಂಬಲ ವ್ಯಕ್ತಪಡಿಸುವ ಪ್ರಮಾಣ ಪತ್ರ ವಿತರಿಸಿದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸಹ ನಮಗೆ ಬೆಂಬಲ ನೀಡಿದರೆ ಮತ್ತಷ್ಟು ಧ್ವನಿ ಜಾಸ್ತಿ ಮಾಡಬಹುದು. ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಬಾಹ್ಯ ಬೆಂಬಲ ನೀಡಿದ್ದೇನೆ ಅಷ್ಟೇ. ಸಹ ಸದಸ್ಯತ್ವ ಪಡೆದಿಲ್ಲ. ಕೇವಲ ಬಾಹ್ಯ ಬೆಂಬಲ ನೀಡಿದ್ದೇನೆ. ಕಾಂಗ್ರೆಸ್ ಪಕ್ಷ ನನ್ನನ್ನು ಬೆಂಬಲಿಸಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಕ್ಷೇತ್ರದ ಜನರ ಜತೆ ಚರ್ಚೆ ಮಾಡಿ ಮುಂದುವರೆಯುತ್ತೇನೆ. ಪಂಚಾಯತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗಳು ಹೆಚ್ಚು ಜನ ಗೆದ್ದು ಬಂದು ಹೆಚ್ಚು ಪಂಚಾಯತ್ನಲ್ಲಿ ಅಧಿಕಾರ ಹಿಡಿದಿದ್ದೇವೆ. ಮುಂದಿನ ದಿನಗಳಲ್ಲಿ ನಾನು ಸ್ವಾತಂತ್ರ್ಯ ಅಭ್ಯರ್ಥಿಯಾಗಿರುತ್ತೇನೆ. ಕಾಂಗ್ರೆಸ್ ಪಕ್ಷದವರು ಕೂಡ ಬೆಂಬಲ ಸ್ವೀಕಾರ ಮಾಡಿದ್ದಾರೆ. ಒಬ್ಬಂಟಿಯಾಗಿ ಹೋರಾಟ ಮಾಡುವ ಬದಲು ಪಕ್ಷದ ಬೆಂಬಲ ಪಡೆದಿದ್ದೇನೆ. ಕ್ಷೇತ್ರ ಅಭಿವೃದ್ಧಿಗಾಗಿ ಈ ನಿರ್ಧಾರ ಮಾಡಿದ್ದೇನೆ ಎಂದರು.