ಬೆಂಗಳೂರು: ಚರ್ಚೆಗೆ ಮತ್ತೆ ಎರಡು ದಿನ ಕಾಲಾವಕಾಶ ಕೊಡಿ ಎಂದು ಸಿಎಂ ಕುಮಾರಸ್ವಾಮಿ, ಸ್ಪೀಕರ್ ಬಳಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಚರ್ಚೆಗೆ ಮತ್ತೆರಡು ದಿನ ಕಾಲಾವಕಾಶ ಕೊಡಿ: ಸ್ಪೀಕರ್ ಬಳಿ ಮನವಿ ಮಾಡಿಕೊಂಡ್ರಾ ಸಿಎಂ? - news kannada
ಕಳೆದ ವಾರವೇ ಸಿಎಂ ಕುಮಾರಸ್ವಾಮಿಗೆ ವಿಶ್ವಾಸ ಮತಯಾಚನೆ ಮಾಡಲು ಅಧಿವೇಶನದಲ್ಲಿ ಸಮಯ ನಿಗದಿ ಮಾಡಲಾಗಿತ್ತು. ಆದರೆ, ಚರ್ಚೆಗೆ ಅವಕಾಶ ಕೇಳಿದ್ದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಶುಕ್ರವಾರದವರೆಗೂ ಚರ್ಚೆಯನ್ನು ಮುಂದುವರಿಸಿದ್ದರು. ಆದರೆ, ಇಂದು ಸಹ ಸ್ಪೀಕರ್ ಬಳಿ ಮನವಿ ಮಾಡಿಕೊಂಡಿರುವ ಕುಮಾರಸ್ವಾಮಿ, ಮತ್ತೆ ಎರಡು ದಿನ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸದನ ಆರಂಭಕ್ಕೂ ಮುನ್ನ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿದ ಸಿಎಂ, ಆನೇಕ ವಿಷಯಗಳು ಚರ್ಚೆ ಮಾಡಬೇಕಿರುವುದರಿಂದ ಬುಧವಾರದವರೆಗೂ ಅವಕಾಶ ಕೊಡಿ ಎಂದು ಸ್ಪೀಕರ್ ಅವರನ್ನು ಕೋರಿದ್ದಾರೆ ಎಂದು ತಿಳಿದುಬಂದಿದೆ.
ಅತೃಪ್ತ ಶಾಸಕರ ವಿರುದ್ಧದ ವಿಚಾರಣೆ ನಾಳೆ ಬರುತ್ತಿರುವುದರಿಂದ ಸಿಎಂ ಕುಮಾರಸ್ವಾಮಿ, ಮತ್ತೆರಡು ದಿನ ಅವಕಾಶ ಕೋರಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ. ಆದರೆ, ಸಿಎಂ ಮನವಿಗೆ ಸ್ಪೀಕರ್ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಾಲಾವಕಾಶ ಕೊಡಬೇಕೋ, ಬೇಡವೋ ಎಂಬ ಜಿಜ್ಞಾಸೆಯಲ್ಲಿ ಸ್ಪೀಕರ್ ಸಿಲುಕಿದ್ದಾರೆ. ಸ್ಪೀಕರ್ ಕಚೇರಿಯಲ್ಲೇ ಹೆಚ್ಚು ಕಾಲ ಚರ್ಚೆ ನಡೆದಿದ್ದರಿಂದ ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಕಲಾಪ ತಡವಾಗಿ ಪ್ರಾರಂಭವಾಯಿತು. ಈ ನಡುವೆ ಮಧ್ಯಾಹ್ನದ ನಂತರ ವಿಶ್ವಾಸಮತ ಯಾಚನೆಗೆ ಸ್ಪೀಕರ್ ನಿರ್ಧಾರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.