ಬೆಂಗಳೂರು: ಮಂಡ್ಯ ಹಾಲು ಒಕ್ಕೂಟದ ಮೇಲೆ ನಡೆದ ದಾಳಿಯ ಹಿಂದೆ ದೊಡ್ಡ ವ್ಯಕ್ತಿಗಳ ಕೈವಾಡ ಇದ್ದು, ಬೃಹತ್ ಹಗರಣದ ತನಿಖೆ ಎಸಿಬಿ ಮೂಲಕ ಆಗಲಿ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಆಗ್ರಹಿಸಿದ್ದಾರೆ.
ಮಾಜಿ ಸಚಿವ ನರೇಂದ್ರಸ್ವಾಮಿ ಜೊತೆ ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ಮಾತನಾಡಿ, ನಿನ್ನೆ ಹಾಲು ಒಕ್ಕೂಟದ ಮೇಲೆ ನಡೆದ ದಾಳಿ ನೋಡಿ ಗಾಬರಿಯಾಯಿತು. ಇದು ಸಣ್ಣ ಹಗರಣವಲ್ಲ. ದೊಡ್ಡ ಷಡ್ಯಂತ್ರ. ದೊಡ್ಡ ವ್ಯಕ್ತಿ ಇರಬಹುದು ಎನ್ನಿಸಿತ್ತು. ಸರ್ಕಾರ ಈ ಹಗರಣವನ್ನು ದೊಡ್ಡ ತನಿಖಾ ಸಂಸ್ಥೆಗೆ ವಹಿಸಬೇಕು. ಹಿಂದೆ ಡೈರಿಯಿಂದ ನೇರ ಒಕ್ಕೂಟಕ್ಕೆ ಹಾಲು ಬರುತ್ತಿತ್ತು. ಆದರೆ, ಹಾಲಿನ ಗುಣಮಟ್ಟ ಸಂರಕ್ಷಣೆ ದೃಷ್ಟಿಯಿಂದ ಸ್ಥಳೀಯವಾಗಿ ಸಂಗ್ರಹಾಲಯ ನಿರ್ಮಿಸಲಾಗಿದೆ. ಆದರೆ, ಇದೀಗ ಇಲ್ಲೆಲ್ಲ ಅವ್ಯವಹಾರ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಸರ್ಕಾರ ಸಮಸ್ಯೆಯನ್ನು ಮನಗಂಡ ಎಸಿಬಿ ತನಿಖೆಗೆ ವಹಿಸುವುದು ಸೂಕ್ತ ಎಂದರು.