ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ಅವರಿಗೆಮತ ನಿಡುವಂತೆ ಬಿಬಿಎಂಪಿ ಸದಸ್ಯ, ಒಂದು ಅವಕಾಶ ನೀಡುವಂತೆ ಜನರಲ್ಲಿ ಮನವಿ ಮಾಡಿದರು.
ಜನರ ಸೇವೆ ಮಾಡಲು ರಿಜ್ವಾನ್ ಗೆ ಒಂದು ಅವಕಾಶ ಕೊಡಿ: ಕಾರ್ಪೊರೇಟರ್ ಉದಯ್ ಕುಮಾರ್ - kannada news
ರಿಜ್ವಾನ್ ಪರ ಕಾರ್ಪೊರೇಟರ್ ಉದಯ್ ಕುಮಾರ್ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.
ಬಿಬಿಎಂಪಿ ಸದಸ್ಯ ಉದಯ್ ಕುಮಾರ್, ಮಹದೇವಪುರ ಕ್ಷೇತ್ರದ ಹಗದೂರು ವಾರ್ಡ್ನಲ್ಲಿ ನೂರಾರು ಕಾರ್ಯಕರ್ತರ ಜೊತೆಗೆ ಮನೆ ಮನೆಗೆ ತೆರಳಿ ರಿಜ್ವಾನ್ ಪರ ಮತಯಾಚಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಣಾಳಿಕೆಯ ಪ್ರಮುಖ ಅಂಶಗಳನ್ನು ಜನರಿಗೆ ವಿವರಿಸಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಇದ್ರು ಪಿಸಿ ಮೋಹನ್ ಅವರು ಯಾವುದೇ ರೀತಿಯ ಕೆಲಸ ಮಾಡಿಲ್ಲ. ಹಾಗಾಗಿ ಈ ಬಾರಿ ಜನ ಈಗ ಬದಲವಣೆ ಬಯಸುತ್ತಿದ್ದಾರೆ. ರಸ್ತೆ, ಚರಂಡಿ, ಮೂಲಭೂತ ಸೌಲಭ್ಯ ಒದಗಿಸುವವರಿಗೆ ನಮ್ಮ ಮತ ನೀಡುತ್ತೇವೆ ಎಂದು ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿ ಅಭ್ಯರ್ಥಿ ಕಳೆದ ಹತ್ತು ವರ್ಷಗಳಿಂದ ಈ ಭಾಗಕ್ಕೆ ಒಂದೇ ಒಂದು ಬೋರ್ ಸಹ ಹಾಕಿಸದೇ ಜನರನ್ನು ನಿರ್ಲಕ್ಷಿಸಿದ್ದಾರೆ ಎಂದು ಕಾರ್ಪೊರೇಟರ್ ಉದಯ್ ಕುಮಾರ್ ಆರೋಪಿಸಿದರು.