ಬೆಂಗಳೂರು:ಆನ್‌ಲೈನ್ ತರಗತಿಯಿದೆ ಎಂದು ಮನೆಯ ರೂಂನೊಳಗೆ ಸೇರಿದ್ದ 15 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.
ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದ ಬಾಲಕಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಸೋಮವಾರ ಬೆಳಗ್ಗೆ ಆನ್‌ಲೈನ್ ತರಗತಿ ಇದೆ ಎಂದು ರೂಂನೊಳಗೆ ಕುಳಿತಿದ್ದಳು. ತಾಯಿ ಉಪಹಾರಕ್ಕೆ ಕರೆದರೂ ಬಾಗಿಲು ತೆರೆದಿರಲಿಲ್ಲ. ಅನುಮಾನಗೊಂಡು ತಾಯಿ ಕಿಟಕಿಯಲ್ಲಿ ನೋಡಿದಾಗ, ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವುದು ಕಂಡು ಬಂದಿದೆ.