ಕರ್ನಾಟಕ

karnataka

ETV Bharat / state

ಕುಡಿದ ನಶೆಯಲ್ಲಿ ಗೆಳತಿ ಮೇಲೆ ಅತ್ಯಾಚಾರ ಆರೋಪ... ಯುವಕ ಅರೆಸ್ಟ್​​! - ಅತ್ಯಾಚಾರ

ಹೊಸ ವರ್ಷಾಚರಣೆ ವೇಳೆ ಕುಡಿದ ನಶೆಯಲ್ಲಿ ಗೆಳತಿ ಮೇಲೆ ಅತ್ಯಾಚಾರವೆಸಗಿ ನಂತರ ಯುವತಿ ಕಾಲಿಗೆ ಬಿದ್ದು ಮದುವೆಯಾಗ್ತಿನಿ ಅಂತಾ ಹೇಳಿದ್ದ. ಆದರೆ ಬಳಿಕ ಮೋಸ ಮಾಡಿದ್ದನಂತೆ. ಈ ಹಿನ್ನೆಲೆಯಲ್ಲಿ ಯುವತಿ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

accused arrest
ಆರೋಪಿ

By

Published : Jan 7, 2020, 2:46 PM IST

ಬೆಂಗಳೂರು:ಉತ್ತರ ಭಾರತ ಮೂಲದ ಯುವತಿ ಮೇಲೆ ಅತ್ಯಾಚಾರ ಮಾಡಿ ನಂತರ ಯುವತಿ ಕಾಲಿಗೆ ಬಿದ್ದು ಮದುವೆಯಾಗ್ತಿನಿ ಅಂತಾ ಹೇಳಿದ್ದ, ಆದರೆ ಬಳಿಕ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಯನ್ನ ಸದ್ಯ ಆರೋಪಿ ವಿನೋದ್ ನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಯುವತಿ ನೀಡಿದ ದೂರಿನನ್ವಯ ಆರೋಪಿ ಬಂಧಿಸಿದ ಪೊಲೀಸರು

ಪ್ರತಿಷ್ಟಿತ ಕಂಪನಿಯ ಸೀನಿಯರ್ ಇಂಜಿನಿಯರ್ ಆಗಿರುವ ವಿನೋದ್ ಸಂತ್ರಸ್ತೆಯನ್ನ ಮೊದಲು ಪರಿಚಯ ಮಾಡಿಕೊಂಡು ನಂತರ ಹೊಸ ವರ್ಷದ ಶುಭಕೋರುವ ಹಿನ್ನೆಲೆ ಕಾಲ್ ಮಾಡಿ ಕೋರಮಂಗಲಕ್ಕೆ​ಕರೆಸಿಕೊಂಡಿದ್ದನಂತೆ.

ನಂತರ ಇಬ್ಬರು ಕೋರಮಂಗಲದ ಆರನೇ ಬ್ಲಾಕ್ ನಲ್ಲಿರುವ ಬ್ರೋಕ್ಸ್ ಬಾಂಡ್ಲ್ ಪಬ್​ಗೆ ಹೋಗಿದ್ದು ,ಈ ವೇಳೆ ಯುವಕ ಸಂತ್ರಸ್ತೆಗೆ ಮದ್ಯಪಾನ ಮಾಡಿಸಿದ್ದಾನೆ. ಸಂತ್ರಸ್ತೆ ಕುಡಿದ ಅಮಲಿನಲ್ಲಿ ಪಿ.ಜಿಗೆ ಹೋದ್ರೆ ಸರಿಯಲ್ಲ ಹಿಗಾಗಿ ರೂಂ ಬುಕ್ಕು ಮಾಡು ಎಂದು ಹೇಳಿದ್ದಾಳೆ. ಹೀಗಾಗಿ ಆರೋಪಿ ರೂಂ ಬುಕ್ ಮಾಡಿ ಇಬ್ಬರು ರೂಂ ನಲ್ಲಿರುವಾಗ ಆರೋಪಿ ಸಂತ್ರಸ್ತೆ ಜೊತೆ ಮದ್ಯದ ನಶೆಯಲ್ಲಿ ಅತ್ಯಾಚಾರ ಮಾಡಿದ್ದಾನೆ.

ಈ ವೇಳೆ ಸಂತ್ರಸ್ತೆ ಆಂಧ್ರದಲ್ಲಿ ನಡೆದ ದಿಶಾ ರೇಪ್ ಆಂಡ್ ಮರ್ಡರ್ ಹಾಗೂ ಆ ಬಳಿಕ ನಡೆದ ಎನ್​​ಕೌಂಟರ್​​ ನೆನೆದು "ನಾನು ನಿನ್ನ ಮದುವೆಯಾಗ್ತಿನಿ ಪ್ಲೀಸ್ ಪೊಲೀಸರಿಗೆ ದೂರು ನೀಡಬೇಡ.." ಅಂತ ಯುವತಿಯ ಕೈಕಾಲು ಬಿದ್ದಿದ್ದನಂತೆ.

ಆದ್ರೆ ಕೊಟ್ಟ ಮಾತಿನಂತೆ ಟೆಕ್ಕಿ ನಡೆದುಕೊಂಡಿಲ್ಲ ಎಂದು ಸಂತ್ರಸ್ತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details