ದೊಡ್ಡಬಳ್ಳಾಪುರ: ಮಳೆಯಲ್ಲಿ ಆಟವಾಡುತ್ತಿದ್ದ ಬಾಲಕಿಯರು ಕೃಷಿ ಹೊಂಡಕ್ಕೆ ಬಿದ್ದ ಪರಿಣಾಮ ಒರ್ವ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ತಂಬೇನಹಳ್ಳಿಯಲ್ಲಿ ನಡೆದಿದೆ.
ಮಳೆಯಲ್ಲಿ ಆಟವಾಡುತ್ತಿದ್ದ ಬಾಲಕಿ ಕೃಷಿ ಹೊಂಡಕ್ಕೆ ಬಿದ್ದು ಸಾವು - ತಂಬೆನಹಳ್ಳಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕಿ ಸಾವು
ಮಳೆ ನೀರಿನಲ್ಲಿ ಆಟವಾಡುತ್ತ ಮೂವರು ಬಾಲಕಿಯರು ಕೃಷಿ ಹೊಂಡಕ್ಕೆ ಬಿದ್ದ ಘಟನೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದಿದ್ದು, ಘಟನೆಯಲ್ಲಿ ಒರ್ವ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರು ತೀರ್ವ ಅಸ್ವಸ್ಥಗೊಂಡಿದ್ದಾರೆ.
ಬಾಲಕಿ ಕೃಷಿ ಹೊಂಡಕ್ಕೆ ಬಿದ್ದು ಸಾವು
ಗಂಗಲಕ್ಷ್ಮೀ(10) ಮೃತ ಬಾಲಕಿ. ಸಂಜೆ ಸುರಿದ ಮಳೆಗೆ ಮೂವರು ಗೆಳತಿಯರು ಆಟವಾಡುತ್ತ ಕೃಷಿ ಹೊಂಡದ ಕಡೆ ಹೋಗಿದ್ದಾಗ, ಹೊಂಡಕ್ಕೆ ಬಿದ್ದಿದ್ದಾರೆ. ಪರಿಣಾಮ ನೀರಿನಲ್ಲಿ ಮುಳುಗಿ ಗಂಗಲಕ್ಷ್ಮೀ ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ. ತಂಬೇನಹಳ್ಳಿ ಗ್ರಾಮದ ನಾಗಮ್ಮ, ಶಿಲ್ಪ ತೀರ್ವ ಅಸ್ವಸ್ಥಗೊಂಡಿದ್ದಾರೆ.
ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಕಳುಹಿಸಲಾಗಿದೆ, ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.