ಕರ್ನಾಟಕ

karnataka

ETV Bharat / state

ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ - ಟ್ರಾಫಿಕ್ ಡಿಸಿಪಿ ಕಲಾಕೃಷ್ಣಸ್ವಾಮಿ

ಬಿಎಂಟಿಸಿ ಬಸ್​ವೊಂದು ಸ್ಕೂಟರ್​ಗೆ ಡಿಕ್ಕಿ ಹೊಡೆದು ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಕೆ ಆರ್ ಪುರ ಸಂಚಾರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಲಾವ್ಯಾಶ್ರೀ
ಲಾವ್ಯಾಶ್ರೀ

By

Published : Nov 22, 2022, 5:46 PM IST

ಬೆಂಗಳೂರು: ಅಜಾಗರೂಕತೆ ಹಾಗೂ ವೇಗವಾಗಿ ಬಿಎಂಟಿಸಿ ಬಸ್ ಚಲಿಸಿದ ಪರಿಣಾಮ ಮುಂದೆ ಹೋಗುತ್ತಿದ್ದ ಸ್ಕೂಟರ್​ಗೆ ಡಿಕ್ಕಿ ಹೊಡೆದು 16 ವರ್ಷದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ಕೆ ಆರ್ ಪುರ‌ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಲಾವ್ಯಾಶ್ರೀ (16) ಬಿಎಂಟಿಸಿ ಬಸ್​ಗೆ ಬಲಿಯಾದ ದುರ್ದೈವಿಯಾಗಿದ್ದಾಳೆ‌. ದುರ್ಘಟನೆ ಸಂಬಂಧ ಅಪಘಾತ ಎಸಗಿದ ಚಾಲಕ ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಪೂರ್ವ ವಿಭಾಗದ ಟ್ರಾಫಿಕ್ ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.

ಪೂರ್ವ ವಿಭಾಗದ ಟ್ರಾಫಿಕ್ ಡಿಸಿಸಿ ಕಲಾಕೃಷ್ಣಸ್ವಾಮಿ ಅವರು ಮಾತನಾಡಿದರು

ಇಂದು ಬೆಳಗ್ಗೆ ಟಿ ಸಿ ಪಾಳ್ಯದಿಂದ ಭಟ್ಟರಹಳ್ಳಿ ಬಳಿ ಯೂ ಟರ್ನ್ ತೆಗೆದುಕೊಂಡು ಸರ್ವೀಸ್ ರಸ್ತೆಯಲ್ಲಿ ವೇಗವಾಗಿ ಬಸ್ ಚಲಾಯಿಸಿದ‌ ಪರಿಣಾಮ ಮುಂದೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ 45 ವರ್ಷದ ಪ್ರಿಯಾದರ್ಶಿನಿ ಹಾಗೂ ಹಿಂಬದಿ ಕೂತಿದ್ದ ಲಾವ್ಯಾಶ್ರೀ ಗೆ ಡಿಕ್ಕಿ ಹೊಡೆದಿದೆ.‌ ಅಪಘಾತ ರಭಸಕ್ಕೆ ಕೂಡಲೇ ಬಿದ್ದು ಗಂಭೀರ ಗಾಯಗೊಂಡಿದ್ದಾರೆ‌. ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದರೂ ಲಾವ್ಯಾಶ್ರೀ ಮೃತಪಟ್ಟಿದ್ದಾಳೆ ಎಂದು ಡಿಸಿಪಿ ತಿಳಿಸಿದ್ದಾರೆ‌.

ಓದಿ:ಕಾರು-ಬಸ್​​ ನಡುವೆ ಭೀಕರ ರಸ್ತೆ ಅಪಘಾತ: 11 ಮಂದಿ ದುರ್ಮರಣ

ABOUT THE AUTHOR

...view details