ಬೆಂಗಳೂರು:ರಾಜಸ್ಥಾನ ಮೂಲದ ಬೆಂಗಳೂರು ಡಿಗ್ರೂಪ್ ಲೇಔಟ್‌ನ ಸುರೇಶ್(20) ಡ್ರಗ್ ಮಾರಲೆತ್ನಿಸಿ ಸೆರೆಯಾದ ಆರೋಪಿ. ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬನಶಂಕರಿ 3ನೇ ಹಂತ, ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜು ಎದುರು ಪರಿಚಯಸ್ಥರಿಗೆ ಆರೋಪಿ ಸುರೇಶ್, ಅಫೀಮು ಮಾರಾಟ ಮಾಡುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಅಫೀಮು ಮಾರಾಟಕ್ಕೆ ಯತ್ನ: ಓರ್ವನ ಬಂಧನ - Girinagar police
ಕಾಲೇಜು ವಿದ್ಯಾರ್ಥಿಗಳಿಗೆ ಅಫೀಮು ಮಾರಾಟ ಮಾಡಲು ಯತ್ನಿಸುತ್ತಿದ್ದ ಖದೀಮನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 10 ಲಕ್ಷ ರೂ. ಮೌಲ್ಯದ 2430 ಗ್ರಾಂ ತೂಕದ ಅಫೀಮು ವಶಪಡಿಸಿಕೊಂಡಿದ್ದಾರೆ.
ಆರೋಪಿಯಿಂದ ಸುಮಾರು 10,80,000 ರೂ. ಮೌಲ್ಯದ 2430 ಗ್ರಾಂ ತೂಕದ ಅಫೀಮು, 1000 ರೂ. ನಗದು ಹಣ, ಕಪ್ಪು ಬಣ್ಣದ ಬ್ಯಾಗ್ ಹಾಗೂ ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ ವಶಪಡಿಸಿಕೊಂಡಿದ್ದಾರೆ. ಆರೋಪಿ ಸುರೇಶ್ ಮತ್ತು ಈತನ ತಂದೆ ಬಾಬುಲಾಲ್ ಅಫೀಮನ್ನು ಪರಿಚಯವಿರುವ ರಾಜಸ್ಥಾನದ ವ್ಯಕ್ತಿಯಿಂದ ಪಡೆದುಕೊಂಡು ಅದನ್ನು ಚಿಕ್ಕ-ಚಿಕ್ಕ ಪ್ಯಾಕೆಟ್ ಮಾಡಿ ನಗರದ ಪ್ರತಿಷ್ಠಿತ ಕಾಲೇಜುಗಳ ಬಳಿ ವಿದ್ಯಾರ್ಥಿಗಳಿಗೆ, ಸೇಟುಗಳಿಗೆ ಹಾಗೂ ಇತರೆ ಗಿರಾಕಿಗಳಿಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.