ಕರ್ನಾಟಕ

karnataka

ETV Bharat / state

ಮೀಸಲಾತಿ ಹಂಚಿಕೆ ವಿಚಾರದಲ್ಲಿ ಬಿಜೆಪಿ ಸರ್ಕಾರದಿಂದ ಗಿಮಿಕ್: ದಿನೇಶ್​ ಗುಂಡೂರಾವ್ - ಬಿಜೆಪಿಯಿಂದ ಕೀಳುಮಟ್ಟದ ರಾಜಕಾರಣದ ಆರೋಪ

''ಬಿಜೆಪಿಯವರು ಒಕ್ಕಲಿಗ ಲಿಂಗಾಯತ ಸಮಾಜಕ್ಕೆ ಉಪಯೋಗ ಮಾಡಿದ್ದೀವಿ ಅಂತ ತೋರಿಸೋದಕ್ಕೆ ಹೋಗಿ ಈಗ ಸಿಕ್ಕಿಹಾಕಿಕೊಂಡಿದ್ದಾರೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ. ಹಿಂದೂ- ಮುಸ್ಲಿಮರ ಗಲಾಟೆ ಮಾಡಿಸಲು ಪ್ರಚೋದನೆ ಕೊಟ್ಟರು, ಆದರೆ ಅದು ಆಗಲಿಲ್ಲ'' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಹೇಳಿದ್ದಾರೆ.

Former KPCC President Dinesh Gundurao
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್

By

Published : Apr 25, 2023, 5:49 PM IST

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಮಾತನಾಡಿದರು.

ಬೆಂಗಳೂರು: ''ಚುನಾವಣಾ ಸಂದರ್ಭದಲ್ಲಿ ಮುಸ್ಲಿಮರನ್ನು ಕೆರಳಿಸಲು ನೋಡಿದ್ರು. ಆದರೆ, ಮುಸ್ಲಿಂ ಸಮುದಾಯದವರು ತಾಳ್ಮೆಯಿಂದ ನಡೆದುಕೊಂಡಿದ್ದಾರೆ'' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಹೇಳಿದರು.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಶೇ.4ರಷ್ಟು ಮೀಸಲಾತಿ ಕಿತ್ತುಕೊಂಡು ಬೇರೆ ಸಮುದಾಯಕ್ಕೆ ನೀಡಿದ್ದಕ್ಕೆ ನ್ಯಾಯಾಲಯದಿಂದ ಸರಿಯಾದ ಉತ್ತರ ಸಿಕ್ಕಿದೆ. ಈಗ ಏನು ಮಾಡಲು ಆಗುವುದಿಲ್ಲ. ಜನರಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಬಿಜೆಪಿಯವರು ಮಾಡ್ತಾರೆ. ಈ ರೀತಿಯ ತೀರ್ಪು ಬರುತ್ತೆ ಎಂಬುದು ನನಗೆ ಗೊತ್ತಿತ್ತು. ಘೋಷಣೆ ಮಾಡಿಬಿಡೋಣ, ಚುನಾವಣಾ ಬಂದ ಮೇಲೆ ನೋಡಿಕೊಳ್ಳೋಣ ಎಂದು ಮಾಡಿದ್ರು. ಕೋರ್ಟ್ ತೀರ್ಮಾನ ಆಗುವಷ್ಟರಲ್ಲಿ ಲಾಭ ಮಾಡಿಕೊಳ್ಳುವ ಪ್ಲಾನ್​ನಲ್ಲಿತ್ತು. ಜನರನ್ನು ಫೂಲ್ ಮಾಡಲು ಹೊರಟಿದ್ದಾರೆ. ಜನ ತುಂಬ ಬುದ್ಧಿವಂತರು ಇದ್ದಾರೆ. ತಾಳ್ಮೆಯಿಂದ ಕಾಯ್ದ ಮುಸ್ಲಿಂ ಸಮುದಾಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ'' ಎಂದರು.

ಬಿಜೆಪಿಯಿಂದ ಕೀಳುಮಟ್ಟದ ರಾಜಕಾರಣ- ಆರೋಪ:''ಹಿಂದುಳಿದ ವರ್ಗಗಳ ಆಯೋಗ ಯಾವುದೇ ವರದಿ ಕೊಡದೆಯೇ ಯಾವ ಆಧಾರದ ಮೇಲೆ ತೆಗೆದುಹಾಕಿದ್ದಾರೆ? ಜಯಪ್ರಕಾಶ್ ಹೆಗಡೆ ಕಮಿಷನ್ ಆದ್ರೂ ಶಿಫಾರಸು ಮಾಡಬೇಕಾಗಿತ್ತು. ಸರ್ವೆ ಮಾಡಿ ಅಧ್ಯಯನ ಮಾಡಿ ಅವರಾದರೂ ವರದಿ ಕೊಡಬೇಕಾಗಿತ್ತು. ಸಾಚಾರ್ ಕಮಿಷನ್ ರಿಪೋರ್ಟ್ ಪ್ರಕಾರ ಮುಸ್ಲಿಮರು ಹಿಂದುಳಿದಿದ್ದಾರೆ ಅಂತ ಇದೆ. ಇವರ ಉದ್ದೇಶ ನೀಚತನದಿಂದ ಕೂಡಿದೆ ಎಂಬುದು ಈಗ ಏಕ್ಸಪೋಸ್ ಆಗಿದೆ. ಒಕ್ಕಲಿಗ ಲಿಂಗಾಯತ ಸಮಾಜಕ್ಕೆ ಉಪಯೋಗ ಮಾಡಿದ್ದೀವಿ ಅಂತ ತೋರಿಸೋದಕ್ಕೆ ಹೋಗಿ ಈಗ ಸಿಕ್ಕಿಹಾಕಿಕೊಂಡಿದ್ದಾರೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಹಿಂದೂ ಮುಸ್ಲಿಮರ ಗಲಾಟೆ ಮಾಡಿಸಲು ಪ್ರಚೋದನೆ ಕೊಟ್ಟರು. ಅದು ಆಗಲಿಲ್ಲ. 2ಡಿ 2ಸಿ ಮೀಸಲಾತಿ ನೀಡಿದ್ದೇವೆ ಅಂತ ತೋರಿಸೋದಕ್ಕೆ ಹೊರಟರು. ಅದೂ ಕೂಡ ಆಗಲಿಲ್ಲ. ಬಿಜೆಪಿ ನಗ್ನ ಆಗಿದೆ, ಸ್ವಾರ್ಥಕ್ಕೋಸ್ಕರ ಏನು ಬೇಕಾದರೂ ಮಾಡುತ್ತದೆ ಎಂದು ತೋರಿಸಿದೆ. ಕೀಳುಮಟ್ಟದ ರಾಜಕಾರಣ ಮಾಡುವ ಬಿಜೆಪಿಯನ್ನು ತೆಗೆದುಹಾಕಬೇಕು'' ಎಂದು ದಿನೇಶ್​ ಗುಂಡೂರಾವ್​ ಒತ್ತಾಯಿಸಿದರು.

''ಮೀಸಲಾತಿ ಹಂಚಿಕೆ ವಿಚಾರದಲ್ಲಿ ಬಿಜೆಪಿ ಸರ್ಕಾರವು ಗಿಮಿಕ್ ಮಾಡಿದೆ. ಎಲ್ಲರನ್ನೂ ಮೋಸ ಮಾಡಲು ಮಾಡಿದ್ದಾರೆ. ಜನರಿಗೆ ಏನೋ ತೋರಿಸಿ, ನಾವು ನಿಮಗೆ ಕೊಡುಗೆ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಕೋರ್ಟ್​ನಲ್ಲಿ ಸ್ಟೇ ಸಿಕ್ಕಿರೋದು ಅವರಿಗೆ (ಬಿಜೆಪಿಗೆ) ಕಪಾಳ ಮೋಕ್ಷ. ವೈಜ್ಞಾನಿಕವಾಗಿ ವರದಿ ತೆಗೆದುಕೊಳ್ಳದೇ ಏಕಾಏಕಿಯಾಗಿ ತೀರ್ಮಾನ ಮಾಡಿದ್ದರು'' ಎಂದು ಆರೋಪಿಸಿದರು.

ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ:''ಧರ್ಮ ಆಧಾರಿತವಾಗಿ ಮೀಸಲಾತಿ ಕೊಡುವುದು ಸಂವಿಧಾನದಲ್ಲಿ ಇಲ್ಲ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಶೋಭಾ ಕರಂದ್ಲಾಜೆ ಅವರಿಗೆ ಜ್ಞಾನದ ಕೊರತೆ ಇದೆ. ತಿಳಿದುಕೊಳ್ಳಲು ಅವರು ಹೋಗಿಲ್ಲ ಅನಿಸುತ್ತದೆ. ಕ್ರಿಸ್ಚಿಯನ್, ಭೌದ್ದ, ಜೈನ್, ಸಮುದಾಯಕ್ಕೆ ಮೀಸಲಾತಿ ಇದೆ. ಅದನ್ನು ಯಾಕೆ ತೆಗೆದಿಲ್ಲ. ಹೀಗಾಗಿ ಇದು ಧರ್ಮದ ಆಧಾರಿತ ಮೀಸಲಾತಿ ಅಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವುದು ಅದು. ಅದಕ್ಕಾಗಿ ಆಯೋಗವಿದೆ. ಆದರೆ, ಶೋಭಾ ಕರಂದ್ಲಾಜೆ ಅವರಿಗೆ ಹಿಂದೂ- ಮುಸ್ಲಿಂ ಮಾತ್ರ ಕಾಣಿಸುತ್ತದೆ. ಬೆಂಕಿ ಹಚ್ಚುವ ಕೆಲಸ ಮಾತ್ರ ಅವರಿಗೆ ಗೊತ್ತಿದೆ ಹೊರತು, ಸಮಾಜದ ಉದ್ಧಾರ ಮಾಡುವ ಉದ್ದೇಶವಿಲ್ಲ. ಅಜ್ಞಾನದಿಂದ ಕೂಡಿರುವ ಮಾತನ್ನು ಶೋಭಾ ಕರಂದ್ಲಾಜೆ ಹೇಳಿದ್ದಾರೆ'' ಎಂದು ಅವರು ಕಿಡಿಕಾರಿದ್ದಾರೆ.

''ಪಾರ್ಲಿಮೆಂಟ್​ನಲ್ಲಿ ಬಹುಮತವಿದೆ ಸೇರಿಸುತ್ತೇವೆ ಎಂದು ಅವರು ಹೇಳುತ್ತಿಲ್ಲ. ಯಾಕೆಂದರೆ ಅದು ಕಾನೂನು ಬಾಹಿರ. ಭಾವನಾತ್ಮಕವಾಗಿ ಗೊಂದಲ ಮೂಡಿಸಿ ಮತ ಪಡೆಯುವ ಕೆಲಸ ಮಾಡ್ತಾ ಇದ್ದಾರೆ. ಅಮಿತ್ ಶಾಗೆ ಮುಸ್ಲಿಂ ಮಾತ್ರ ಕಾಣಿಸುತ್ತಾರೆ. ಒಡೆದು ಆಳುವ ನೀತಿ ಇದು. ಈ ರೀತಿಯ ತೀರ್ಪು ಬರುತ್ತದೆ ಎಂದು ನನಗೆ ಗೊತ್ತಿತ್ತು. ಜನರನ್ನು ಫೂಲ್‌ ಮಾಡುತ್ತಿದ್ದಾರೆ. ಇದೊಂದು ಕೀಳು ಮಟ್ಟದ ರಾಜಕಾರಣ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸವದಿ, ಶೆಟ್ಟರ್​ರನ್ನು ಮೂಲೆಗುಂಪು ಮಾಡಿದ ಬಿಜೆಪಿ:ಸ್ಟೇ ಕೊಟ್ಟಿಲ್ಲ ಯಥಾಸ್ಥಿತಿ ಕಾಪಾಡಿಕೊಳ್ಳಿ ಎಂದು ಹೇಳಿದೆ ಎಂದು ಅಡ್ವಕೇಟ್ ಜನರಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಸರ್ಕಾರವೇ ಹೇಳುತ್ತದೆ ನಾವು ಜಾರಿ‌‌ ಮಾಡಲ್ಲ ಅಂದ್ರೇನು? ಸ್ಟೇ ಅಂದರೇನು, ಜಾರಿ ಮಾಡಲು ಆಗಲ್ಲ, ಮೀಸಲಾತಿ ತೆಗೆಯಲು ಆಗಲ್ಲ. ಹಳೇ ಪದ್ಧತಿ ಪ್ರಕಾರ ಮೀಸಲಾತಿ ಕೊಡಬೇಕು. ಮುಸ್ಲಿಂ ಮೀಸಲಾತಿ ಇರುವುದಕ್ಕೆ ಡಾಕ್ಟರ್, ಇಂಜಿನಿಯರ್ ಆಗಿದ್ದಾರೆ. ಮುಸ್ಲಿಂ ಸಮುದಾಯದ ತಾಳ್ಮೆಯಿಂದ ನಡೆದುಕೊಂಡಿದ್ದಾರೆ. ಮಠದ ಸ್ವಾಮಿಗಳು ಸಹ ಕಿತ್ತುಕೊಳ್ಳಬೇಡಿ ಎಂದು ಅವರು ಹೇಳಿದ್ದಾರೆ. ಲಿಂಗಾಯತರಿಗೆ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಮೋಸ ಮಾಡಲಾಗಿದೆ. ಬಿಜೆಪಿ ಹಿರಿಯ ಲಿಂಗಾಯತ ಮುಖಂಡರನ್ನ ಮುಗಿಸಲು ಹೊರಟಿದ್ದಾರೆ. ಯಡಿಯೂರಪ್ಪ ಅವರು ದೊಡ್ಡ ಮುಖಂಡರು. ಅವರೇ ಕೈ ಚೆಲ್ಲಿ ಕುಳಿತಿದ್ದಾರೆ. ಯಾಕೆ ಸುಮ್ಮನಾಗಿದ್ದಾರೆ ಗೊತ್ತಿಲ್ಲ. ಶೆಟ್ಟರ್​ಗೆ ಟಿಕೆಟ್ ಕೊಡಬಾರದು ಎಂದು ತೀರ್ಮಾನ ಆದಾಗ, ಯಾಕೆ ತಡೆಯಲಿಲ್ಲ. ಯಡಿಯೂರಪ್ಪ ಅವರು ಮನಸ್ಸು ಮಾಡಿದ್ರೆ, ಒತ್ತಡ ತಂದು ಮಾಡಬಹುದಿತ್ತು. ಸವದಿ, ಶೆಟ್ಟರ್​ರನ್ನು ಮೂಲೆಗುಂಪು ಮಾಡಿದ್ರು'' ಎಂದು ಹೇಳಿದ್ರು.

ಶೆಟ್ಟರ್ ಹಾಗೂ ಸಿದ್ದರಾಮಯ್ಯ ಸೋಲಿಸಲು ಬಿ.ಎಲ್. ಸಂತೋಷ್​ ಪ್ರಯತ್ನದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ''ಸಿದ್ದರಾಮಯ್ಯರನ್ನು ಸೋಲಿಸಬೇಕು ಎಂದು ತಂತ್ರ ಮಾಡುತ್ತಲೇ ಇರುತ್ತಾರೆ. ಅದೇನು ಹೊಸದಲ್ಲ. ಜಗದೀಶ್ ಶೆಟ್ಟರ್ ವಿಚಾರದಲ್ಲಿ ಪ್ರಹ್ಲಾದ್ ಜೋಶಿ, ಸಂತೋಷ್​ ಅವರ ಮರ್ಯಾದೆ ಪ್ರಶ್ನೆ. ಅವರನ್ನು ಅವರೇ ಹೊರಗಡೆ ಹಾಕಿಸಿದ್ದಾರೆ. ಶೆಟ್ಟರ್ ಬಗ್ಗೆ ಜೋಶಿ ಹಗುರವಾಗಿ ಮಾತಾಡಿದ್ದಾರೆ'' ಎಂದು ದಿನೇಶ್​ ಗುಂಡೂರಾವ್​ ಆರೋಪಿಸಿದರು.

ಇದನ್ನೂ ಓದಿ:ಲಿಂಗಾಯತರ ಮತ ಸೆಳೆಯಲು ಬಿಎಸ್​​ವೈ ಪ್ಲಾನ್​​: ವೀರಶೈವ ಸಮಾಜದ ಸ್ನೇಹಮಿಲನ

ABOUT THE AUTHOR

...view details