ಬೆಂಗಳೂರು: ವಿಜಯನಗರದ ಕ್ಲಬ್ ರೋಡ್ನಲ್ಲಿ ಬೃಹತ್ ಮರವೊಂದು ಧರೆಗುರುಳಿ ನಾಲ್ಕು ಕಂಬಗಳು ನೆಲಕಚ್ಚಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಬೆಂಗಳೂರಿನ ವಿಜಯನಗರದಲ್ಲಿ ಧರೆಗುರುಳಿದ ಬೃಹತ್ ಮರ: ನಾಲ್ಕು ವಿದ್ಯುತ್ ಕಂಬಗಳು ಜಖಂ... - undefined
ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಬುಡ ಸಮೇತ ಮರವೊಂದು ಧರೆಗುರುಳಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಸದ್ಯ ಬಿಬಿಎಂಪಿಯಿಂದ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಧರೆಗುರುಳಿದ ಬೃಹತ್ ಮರ
ಇಂದು ಬೆಳಗ್ಗೆ 7.30ರ ಸುಮಾರಿಗೆ ವಿಜಯನಗರದ ಕ್ಲಬ್ ರೋಡ್ ನಲ್ಲಿ ಈ ಘಟನೆ ನಡೆದಿದೆ. ಮರಬಿದ್ದ ಪರಿಣಾಮ ರಸ್ತೆಬದಿಯ ನಾಲ್ಕು ವಿದ್ಯುತ್ ಕಂಬಗಳು ಜಖಂಗೊಂಡಿವೆ. ಅದೃಷ್ಟವಶಾತ್ ಬೆಳಗ್ಗೆಯಾದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಮರವೂ ಬಹಳ ಹಳೆಯದಾದ ಕಾರಣ ಬೇರು ಸಹಿತ ಧರೆಗುರುಳಿದ್ದು, ರಸ್ತೆ ಪೂರ್ತಿ ಅಡ್ಡಲಾಗಿ ಬಿದ್ದಿದೆ.ಹೀಗಾಗಿದಿನ ನಿತ್ಯ ಅದೇ ರಸ್ತೆಯಲ್ಲಿ ಚಲಿಸುವ ವಾಹನ ಸವಾರರು ತಮ್ಮ ಮಾರ್ಗ ಬದಲಾವಣೆ ಮಾಡಬೇಕಾಯಿತು. ಸದ್ಯ ಬಿಬಿಎಂಪಿಯಿಂದ ತೆರವು ಕಾರ್ಯಾಚರಣೆ ನಡೆಯುತ್ತಿದೆ.