ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ವೈರಾಣು ತಳಿಗಳ ಹಾವಳಿ ಇನ್ನೂ ಹೆಚ್ಚಾಗಿರುವುದು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯಿಂದ ದೃಢಪಡುತ್ತಿದೆ. ಹೊಸ ರೂಪಾಂತರಿಗಳು ಸಹ ಕಾಣಿಸಿಕೊಳ್ಳಲು ಆರಂಭಿಸಿವೆ. ಇದರಲ್ಲಿ ಬಿಎ.3, ಬಿಎ.4 ಮತ್ತು ಬಿಎ.5 ಎಂಬ ಸೋಂಕು ಪ್ರಕರಣಗಳೂ ಪತ್ತೆಯಾಗುತ್ತಿವೆ.
ಹೊಸ ತಳಿಗಳ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದು, ಕರ್ನಾಟಕದಲ್ಲಿ ಯಾವ ಸೋಂಕು ಪ್ರಾಬಲ್ಯ ಹೊಂದಿದೆ ಎಂಬುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಪ್ರಕಾರ ಕೋವಿಡ್ ರೋಗ ಲಕ್ಷಣಗಳನ್ನು ಹೊಂದಿರುವ ಹೆಚ್ಚಿನ ಜನರು ಓಮಿಕ್ರಾನ್ನ ಬಿಎ-2 ಸೋಂಕಿನಿಂದ ಬಳಲುತ್ತಿದ್ದಾರೆ.
2021ರ ಮಾರ್ಚ್ನಿಂದ ಡಿಸೆಂಬರ್ವರೆಗೆ ಡೆಲ್ಟಾ ಶೇ.90.7ರಷ್ಟಿತ್ತು, 2022ರ ಜನವರಿಯಿಂದ 2022ರ ಏಪ್ರಿಲ್ವರೆಗೆ ಓಮಿಕ್ರಾನ್ ಶೇ.87.80ರಷ್ಟು ಹಾಗೂ 2022ರ ಮೇ ತಿಂಗಳಿಂದ ಜೂನ್‌ವರೆಗೆ ಶೇ.99.20ರಷ್ಟಿತ್ತು ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಪ್ರಸ್ತುತ ಬಿಎ.2 ತಳಿ ಪ್ರಾಬಲ್ಯ ಹೊಂದಿದೆ. ಇದು ಮೇ ತಿಂಗಳಿಂದ ಇಲ್ಲಿಯವರೆಗೆ ಶೇ.80.60ರಿಂದ 89.40ಕ್ಕೆ ಏರಿಕೆಯಾಗಿದೆ. ಬಿಎ.1.1.529 ತಳಿ ಮತ್ತು ಬಿಎ.1 ತಳಿಯು ಕ್ರಮವಾಗಿ ಶೇ.8.60 ಮತ್ತು ಶೇ.0.04ರಷ್ಟು ಕಡಿಮೆಯಾಗಿದೆ. ಆದಾಗ್ಯೂ ಹೊಸ ರೂಪಾಂತರಿ ತಳಿಗಳಾದ ಬಿಎ.3, ಬಿ.ಎ.4 ಮತ್ತು ಬಿ.ಎ.5 ಪ್ರಕರಣಗಳು ಆರಂಭಿಕ ಹಂತದಲ್ಲಿದೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಜುಲೈ 16ರಿಂದ ಪೌತಿ ಖಾತೆ ಅಭಿಯಾನ: ಸಚಿವ ಆರ್.ಅಶೋಕ್