ಬೆಂಗಳೂರು : ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ 103ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಸಿಎಂ ಬಿ ಎಸ್ ಯಡಿಯೂರಪ್ಪ ನಿನ್ನೆ ಉದ್ಘಾಟನೆ ಮಾಡಿದ್ದರು. ಜೂನ್ ತಿಂಗಳಲ್ಲಿ ನೆಡೆಯಬೇಕಿದ್ದ ಸಾಮಾನ್ಯ ಸಭೆ ಹಾಗೂ ಚುನಾವಣೆ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿತ್ತು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಮಹಾ ಚುನಾವಣೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಮಹಾ ಚುನಾವಣೆಯಲ್ಲಿ 48 ಜನ ಗೆಲುವು ಸಾಧಿಸಿದ್ದು, ಒಟ್ಟು 52 ಜನ ನಿರ್ದೇಶಕರು ಮಂಡಳಿಯಲ್ಲಿರಲಿದ್ದಾರೆ. ಈಗಾಗಲೇ ಮಂಡಳಿಯಲ್ಲಿ ಅಧ್ಯಕ್ಷ, ಹಿರಿಯ ಉಪಾಧ್ಯಕ್ಷರನ್ನು ನಿಯೋಜಿಸಲಾಗಿದ್ದು, ಉಪಾದ್ಯಕ್ಷರನ್ನು ಗೆದ್ದ 48 ಜನ ಆಯ್ಕೆ ಮಾಡಿದರು. ಮುಂದಿನ 6 ತಿಂಗಳು ಅಥವಾ ಚುನಾವಣೆ ನೆಡೆಯುವವರೆಗೂ ಇದೆ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಲಿದೆ.
ರಾಜ್ಯಾದ್ಯಂತ 9 ವಿಭಾಗ ಮಾಡಲಾಗಿತ್ತು. ಅತಿ ಸಣ್ಣ, ಮಧ್ಯಮ, ಬೃಹತ್ ಉದ್ದಿಮೆಗಳು, ಸಣ್ಣ, ಮಧ್ಯಮ ವ್ಯಾಪಾರಸ್ಥರು, ವೃತ್ತಿಪರರು, ಸಂಘ ಸಂಸ್ಥೆಗಳು ಹೀಗೆ ಎಲ್ಲಾ ವಿಭಾಗಗಳಲ್ಲಿಯೂ ಚುನಾವಣೆ ನೆಡೆಯಿತು. ಈ ಬಾರಿಯ ಚುನಾವಣೆ ಪ್ರತಿಷ್ಠಿತೆಯ ಕಣವಾಗಿತ್ತು.
ಎರಡು ಬಣಗಳ ನಡುವೆ ತೀವ್ರ ಪೈಪೋಟಿ ನೆಡೆದಿದ್ದು, 96 ಜನ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು, ಪ್ರತಿ ವರ್ಷ ನೆಡೆಯುವ ಚುನಾವಣೆ ಇದಾಗಿದ್ದು, ಇಂದಿನ ಚುನಾವಣೆ ಕಠಿಣ ಹಣಾ ಹಣಿಯಿಂದ ಕೂಡಿತ್ತು. ಸುಮಾರು 1500 ಸದಸ್ಯರು ತಮ್ಮ ಹಕ್ಕು ಹೊಂದಿದ್ದರು, ಕರ್ನಾಟಕದಾದ್ಯಂತ ಪ್ರಸಿದ್ಧ ಉದ್ಯಮಿಗಳು ಬಂದು ತಮ್ಮ ಹಕ್ಕು ಚಲಾಯಿಸಿದರು.
ಇಂದು ಬೆಳಗ್ಗೆ 10ರಿಂದ ಸುಮಾರು 5 ಗಂಟೆಯವರೆಗೆ ಚುನಾವಣೆ ನಡೆದಿದೆ. ನಂತರ ನೂತನ ನಿರ್ದೇಶಕರ ಆಯ್ಕೆಯ ಅಭಿನಂದನಾ ಸಭೆ ಅಧ್ಯಕ್ಷರ ಸಮ್ಮುಖದಲ್ಲಿ ನಡೆಯಿತು. ಸಂಜೆಯಿಂದ ತಡ ರಾತ್ರಿವರೆಗೆ ಉಪಾಧ್ಯಕ್ಷರ ಆಯ್ಕೆ ನಡೆಯಿತು. 52 ಜನ ನಿರ್ದೇಶಕರನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಮಂಡಳಿ ಒಳಗೊಂಡಿದ್ದು. ವಿದ್ಯುನ್ಮಾದ ಮಾದರಿಯಲ್ಲಿ ಚುನಾವಣೆ ನಡೆದಿದ್ದು ವಿಶೇಷವಾಗಿತ್ತು.