ಬೆಂಗಳೂರು:ಸರ್ಕಾರಿ ಇಲಾಖೆಗಳು ಇಂದಿಲ್ಲೊಂದು ಯಡವಟ್ಟು ಮಾಡುತ್ತಲೇ ಇರುತ್ತವೆ. ಅದರಲ್ಲೂ ಈ ಬಾರಿ ಎಲ್ಲರ ಶಿಕ್ಷಣಕ್ಕೆ ಅಡಿಪಾಯ ಹಾಕುವ ಶಿಕ್ಷಣ ಇಲಾಖೆಯೇ ಯಡವಟ್ಟು ಮಾಡಿ ಪೇಚಿಗೆ ಸಿಲುಕಿದೆ.
ಹೌದು, ಇಲಾಖೆಯವರು ಮಾಡಿರೋ ಆ ಯಡವಟ್ಟಿಗೆ ಶಿಕ್ಷಕರೇ ಕಂಗಾಲಾಗಿದ್ದಾರೆ. ಅರೇ ಇಷ್ಟಕ್ಕೂ ಅದೇನು ಯಡವಟ್ಟು, ಅಂತೀರಾ ಹೇಳ್ತಿವಿ ನೋಡಿ..
ಇಲಾಖೆಯು ಮಹಿಳಾ ಶಿಕ್ಷಕಿಯರಿಗೆ ಪುಲ್ಲಿಂಗವೆಂದು ಪುರುಷರಿಗೆ ಸ್ತ್ರೀಲಿಂಗವೆಂದು ಅರ್ಹತಾ ಪಟ್ಟಿಯಲ್ಲಿ ನಮೂದು ಮಾಡಿದೆ. ಇಲಾಖೆಯ ಯಡವಟ್ಟಿಗೆ ಪದೋನ್ನತಿ ಹೊಂದಿದ ಶಿಕ್ಷಕರು ತಬ್ಬಿಬ್ಬುಗೊಂಡಿದ್ದಾರೆ.
APCO, ADPI, SI, BRC ನ ನಿರ್ದಿಷ್ಟ ಹುದ್ದೆಗಳಿಗೆ ಫೆಬ್ರವರಿ 6 ಮತ್ತು 8 ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಲಿಖಿತ ಪರೀಕ್ಷೆಗಳ ಅಂಕಗಳನ್ನು, ಸೇವಾ ಅನುಭವ ಮತ್ತು ಹೆಚ್ಚಿನ ವಿದ್ಯಾರ್ಹತೆಗೆ ಲಭ್ಯವಾಗುವ ಅಂಕಗಳನ್ನು ಕ್ರೋಡೀಕರಿಸಿ ಅಂತಿಮ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅದರಲ್ಲಿ ಈ ಮಹಾನ್ ಯಡವಟ್ಟು ಮಾಡಿ, ಶಿಕ್ಷಕರಿಗೆ ಇರಿಸು ಮುರಿಸು ಮಾಡಿದೆ.