ಕರ್ನಾಟಕ

karnataka

ETV Bharat / state

ಗೀತಾ ಕಾಂಗ್ರೆಸ್ ಸೇರ್ಪಡೆ: ಶಿವರಾಜ್​ಕುಮಾರ್ ಕೂಡ ಪ್ರಚಾರಕ್ಕೆ ಬರುತ್ತಾರೆ - ಗೀತಾ ಶಿವರಾಜ್​ಕುಮಾರ್ - ಗೀತಾ ಶಿವರಾಜ್​ಕುಮಾರ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು

ಇಂದು ಡಾ.ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್​ಕುಮಾರ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

cng
ಗೀತಾ ಶಿವರಾಜ್​ಕುಮಾರ್ ಕಾಂಗ್ರೆಸ್ ಪಕ್ಷ ಸೇರ್ಪಡೆ

By

Published : Apr 28, 2023, 2:28 PM IST

Updated : Apr 28, 2023, 5:27 PM IST

ಗೀತಾ ಶಿವರಾಜ್​ಕುಮಾರ್ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು:ಖ್ಯಾತ ನಟ ಡಾ.ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್​ಕುಮಾರ್ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಸಮ್ಮುಖದಲ್ಲಿ ಗೀತಾ ಶಿವರಾಜ್​ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಈ ವೇಳೆ, ಸಹೋದರ ಸೊರಬ ಕ್ಷೇತ್ರದ ಕೈ ಅಭ್ಯರ್ಥಿ ಮಧು ಬಂಗಾರಪ್ಪ ಉಪಸ್ಥಿತರಿದ್ದರು. ಸೊರಬ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಪರ ಈಗಾಗಲೇ ಅವರು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಸೊರಬದಲ್ಲಿ ಅವರ ಮತ್ತೊರ್ವ ಸಹೋದರ ಕುಮಾರ ಬಂಗಾರಪ್ಪ ಬಿಜೆಪಿ ಅಭ್ಯರ್ಥಿ. ಸೊರಬದಲ್ಲಿ ಸಹೋದರರ ಮಧ್ಯೆ ಪೈಪೋಟಿ ನಡೆಯುತ್ತಿದೆ. ಆ ರಣಕಣಕ್ಕೆ ಮಧು ಬಂಗಾರಪ್ಪ ಬೆಂಬಲವಾಗಿ ಗೀತಾ ಶಿವರಾಜ್​ಕುಮಾರ್ ಪ್ರಚಾರ ನಡೆಸಲಿದ್ದಾರೆ.

ಶಿವರಾಜಕುಮಾರ್ ಕೂಡ ಪ್ರಚಾರ ಮಾಡುತ್ತಾರೆ:ಇದೇ ವೇಳೆ ಮಾತನಾಡಿದ ಗೀತಾ ಶಿವರಾಜ್​ಕುಮಾರ್, ನನ್ನ ತಮ್ಮ ಎಲ್ಲಿರ್ತಾನೋ ನಾನೂ ಅಲ್ಲೇ ಇರುತ್ತೇನೆ. ನಾಳೆಯಿಂದಲೇ ಕ್ಯಾಂಪೇನ್​ಗೆ ಹೋಗ್ತಾ ಇದ್ದೇವೆ. ಕೆಲವು ಕಡೆ ಶಿವರಾಜ್ ಕುಮಾರ್ ಕೂಡ ಪ್ರಚಾರ ಮಾಡ್ತಾರೆ ಎಂದರು. ನಮ್ಮ ತಂದೆ ಬಂಗಾರಪ್ಪನವರನ್ನು ಮುಖ್ಯಮಂತ್ರಿ ಮಾಡಿದ ಪಕ್ಷ. ಐತಿಹಾಸಿಕ ಪಕ್ಷಕ್ಕೆ ಸೇರುತ್ತಿರುವುದು ಖುಷಿ ತಂದಿದೆ. ಎಲ್ಲೆಲ್ಲಿ ಪ್ರಚಾರ ಮಾಡಬೇಕೆಂಬ ಬಗ್ಗೆ ವೇಳಾಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಶಿವರಾಜಕುಮಾರ್ ಸೊರಬದಲ್ಲಿ ಪ್ರಚಾರಕ್ಕೆ ಬರುತ್ತಾರೆ. ಅವರು ಈಗ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಗ್ಯಾರಂಟಿ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದಾರೆ ಎಂದು ತಿಳಿಸಿದರು. ನಿಮಗೆ ಇನ್ನೊಬ್ಬ ತಮ್ಮ ಇದ್ದಾರಲ್ಲ ಎಂಬ ಪ್ರಶ್ನೆಗೆ, ಯಾರು ಎಂದು ಕೇಳಿದ ಗೀತಾ ಶಿವರಾಜ್ ಕುಮಾರ್, ಆ ಬಗ್ಗೆ ನಾನು ಮಾತಾಡಲ್ಲ ಎಂದರು.

ಗೀತಾ ಕಾಂಗ್ರೆಸ್ ಬಲೆಗೆ ಬಿದ್ದಿದ್ದಾರೆ:ಇದೇ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಇದೊಂದು ವಿಶೇಷವಾದ ಮಾಧ್ಯಮಗೋಷ್ಠಿ. ಬಹಳ ಶುಭ ದಿನ. ಗಾಳ ಹಾಕಿ ಹಾಕಿ ಸುಸ್ತಾಗಿ ಹೋಗಿದೆ. ನಮ್ಮ ಗಾಳಕ್ಕೆ ಮಧು ಬಂಗಾರಪ್ಪ ಬಿದ್ದಿದ್ದರು. ಈಗ ನಮ್ಮ ಸಹೋದರಿ ಗೀತಾ ಶಿವರಾಜಕುಮಾರ್​ಗೆ ಬಲೆ ಹಾಕಬೇಕಾಯಿತು. ನಿನ್ನೆ ಉಡುಪಿಯಲ್ಲಿ ರಾಹುಲ್ ಗಾಂಧಿ ಎಲ್ಲ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪ್ರಯಾಣದ ಘೋಷಣೆ ಮಾಡಿದ್ದರು. ಹೆಣ್ಣು ಮಕ್ಕಳು ಯಾರೂ ಬಸ್ ದರ ಕೊಡುವ ಹಾಗಿಲ್ಲ. ಆ ತೀರ್ಮಾನ ಆಗ್ತಾ ಇದ್ದ ಹಾಗೇ ಗೀತಾ ಶಿವರಾಜಕುಮಾರ್ ಬಲೆಗೆ ಬಿದ್ದರು. ನನ್ನ ಬಲೆಗೆ ಬಿದ್ದಿಲ್ಲ. ಆದರೆ ರಾಹುಲ್ ಗಾಂಧಿ ನಿನ್ನೆ ಮಾಡಿದ ಘೋಷಣೆಯಿಂದ ಕಾಂಗ್ರೆಸ್ ಬಲೆಗೆ ಬಿದ್ದರು‌ ಎಂದರು.

ರಾಜ್ ಕುಮಾರ್ ಸೊಸೆ, ನಮ್ಮ ನಾಯಕ ಬಂಗಾರಪ್ಪ ಅವರ ಪುತ್ರಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ರಾಹುಲ್ ಗಾಂಧಿಯೇ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಹೋಗುವಂತೆ ಸೂಚಿಸಿದರು. ನಾವೇನು ಮಾಡಿದರು ಮೊದಲು ಹೆಣ್ಣು, ಬಳಿಕ ಗಂಡು. ಅವರು ಗೀತಾ ಶಿವರಾಜಕುಮಾರ್. ಮೊದಲು ಗೀತಾ ಬಳಿಕ ಶಿವರಾಜಕುಮಾರ್. ಅವರಿಬ್ಬರೂ ಒಂದೇ ಎಂದು ತಿಳಿಸಿದರು‌.

ಬಿಜೆಪಿ ಪರ ನಟ ಸುದೀಪ್ ಪ್ರಚಾರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಟ ಸುದೀಪ್ ಹಾಗೂ ನನ್ನ ನಡುವೆ ಏನು ಮಾತುಕತೆ ಆಯ್ತು ಅಂತಾ ಇಲ್ಲಿ ಹೇಳಕ್ಕಾಗಲ್ಲ. ದರ್ಶನ್ ಸುದೀಪ್ ಇಬ್ರೂ ಸ್ನೇಹಿತರು. ಡಿ.ಕೆ ಶಿವಕುಮಾರ್ ನನ್ನ ಒಳ್ಳೆ ಸ್ನೇಹಿತರು ಅಂತಾ ಸುದೀಪ್ ಕೂಡ ಹೇಳಿದ್ದಾರೆ. ನೀವು ಅದನ್ನೂ ಕೇಳಬೇಕಲ್ವಾ ಎಂದರು.

ನಟ ಸುದೀಪ್ ಮತ್ತು ದರ್ಶನ ಪಕ್ಷಕ್ಕೆ ಸೇರಿಲ್ಲ. ಅವರು ಗೆಳೆತನದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿಗೂ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಸುದೀಪ್ ಶಿವರಾಜಕುಮಾರ್ ಒಳ್ಳೆ ಗೆಳೆಯ ಎಂದಿದ್ದಾರೆ. ಅವರು ಒಬ್ಬ ಸ್ನೇಹಿತನಿಗೆ ಯಾವ ರೀತಿ ತ್ಯಾಗ ಮಾಡುತ್ತಾರೆ ಗೊತ್ತಿಲ್ವಾ ಎಂದು ಸೂಚ್ಯವಾಗಿ ತಿಳಿಸಿದರು.

ಇದನ್ನೂ ಓದಿ:ಶೆಟ್ಟರ್, ಸವದಿ ಸೋಲು ಖಚಿತ.. ಸ್ವಂತ ಶಕ್ತಿಯಿಂದಲೇ ಬಿಜೆಪಿ ಅಧಿಕಾರಕ್ಕೆ: ಶೋಭಾ ಕರಂದ್ಲಾಜೆ ವಿಶ್ವಾಸ

Last Updated : Apr 28, 2023, 5:27 PM IST

ABOUT THE AUTHOR

...view details