ಬೆಂಗಳೂರು :ಪ್ರಪಂಚದ ಇತಿಹಾಸದಲ್ಲೇ ಅತಿ ದೊಡ್ಡ ಪ್ರತಿಭಟನೆ ದೆಹಲಿಯಲ್ಲಿ ನಡೆಯುತ್ತಿದೆ. ಅದನ್ನು ಬೆಂಬಲಿಸುವಂತೆ ರಾಜ್ಯಸಭೆ ಸದಸ್ಯ ಜಿ ಸಿ ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಟ್ವೀಟ್ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿರುವ ಅವರು, ದೆಹಲಿಯಲ್ಲಿ 96 ಸಾವಿರ ಟ್ರ್ಯಾಕ್ಟರ್ಗಳು, 1.20 ಕೋಟಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಭಾರತದ ರಾಜಧಾನಿಯ ಹೊರವಲಯದಲ್ಲಿ ನಿಂತಿದ್ದಾರೆ. ಇದು ಇತಿಹಾಸದಲ್ಲಿಯೇ ಅತೀ ದೀರ್ಘ ರೈತ ಪ್ರತಿಭಟನಾ ಮೆರವಣಿಗೆಯಾಗಿದೆ. ನಮ್ಮ ಹೋರಾಟವನ್ನು ಬಲಪಡಿಸಿ, ಇತಿಹಾಸದ ಸುಂದರ ಅಧ್ಯಾಯವಾಗಿರುವ ನಮ್ಮ ಹೋರಾಟವನ್ನು ದಯವಿಟ್ಟು ಜನರಿಗೆ ತಿಳಿಸಿ. ಕನಿಷ್ಠ ನಿಮ್ಮ ಮಿತ್ರರಿಗಾದರೂ ನಮ್ಮ ಮನವಿಯನ್ನು ತಲುಪಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.