ಕರ್ನಾಟಕ

karnataka

ETV Bharat / state

ವಾರಾಂತ್ಯದಲ್ಲಿ ಲಾಕ್​​ಡೌನ್ ಮಾಡುವಂತೆ ಸಿಎಂಗೆ ಜಿಸಿ ಚಂದ್ರಶೇಖರ್ ಪತ್ರ - ಬೆಂಗಳೂರು ಸುದ್ದಿ

ಕರ್ನಾಟಕದಲ್ಲಿ ಕೊರೊನಾ ವೇಗವಾಗಿ ಹರಡಲು ಮುಖ್ಯ ಕಾರಣವೆಂದರೆ ರಸ್ತೆಗಳಲ್ಲಿ ಮುಕ್ತ ಓಡಾಟ. ಈ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳದೆ ಹೋದರೆ ಮುಂದೆ ಪರಿಸ್ಥಿತಿ ಕಬ್ಬಿಣದ ಕಡಲೆಯಾಗಿ ಪರಿಣಮಿಸುತ್ತದೆ ಹಾಗೂ ಕೊರೊನಾ ನಿಯಂತ್ರಿಸುವುದು ಅಸಾಧ್ಯವಾಗುತ್ತದೆ.

GC Chandrashekhar letter TO_CM as he locked down for the weekend
ಲಾಕ್​​ಡೌನ್ ಮಾಡುವಂತೆ ಸಿಎಂಗೆ ಜಿಸಿ ಚಂದ್ರಶೇಖರ್ ಪತ್ರ

By

Published : Oct 12, 2020, 12:01 AM IST

ಬೆಂಗಳೂರು:ಕೊರೊನಾ ವೈರಸ್ ಹರಡುವುದನ್ನು ತಡೆಯಲು ರಾಜ್ಯದಲ್ಲಿ ಕಟ್ಟುನಿಟ್ಟಿನ ವಾರಾಂತ್ಯದಲ್ಲಿ ಲಾಕ್​​ಡೌನ್​​ ಹೇರುವಂತೆ ರಾಜ್ಯಸಭೆ ಸದಸ್ಯ ಜಿಸಿ ಚಂದ್ರಶೇಖರ್ ಸಿಎಂ ಬಿಎಸ್ ಯಡಿಯೂರಪ್ಪ ಗೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ಎಲ್ಲರನ್ನೂ ಕಳೆದ 10 ತಿಂಗಳಿಂದ ಸತತವಾಗಿ ಬಾಧಿಸಿದೆ. ಬೇಸಿಗೆ ಕಾಲ ಕಳೆದು ಇದೀಗ ಚಳಿಗಾಲಕ್ಕೆ ಕಾಲಿಟ್ಟಿದ್ದೇವೆ. ಚಳಿಗಾಲದಲ್ಲಿ ಕೊರೊನಾ ಪ್ರಕರಣಗಳು ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂಬ ಆತಂಕಕಾರಿ ವಿಚಾರಗಳನ್ನು ಮಾಧ್ಯಮಗಳು ಬಿತ್ತರಿಸುತ್ತಿವೆ. ಇಂತಹ ಸಮಯದಲ್ಲಿ ಮುಂಚಿಗಿಂತಲೂ ಹೆಚ್ಚಿನ ಜಾಗ್ರತೆ ಅತ್ಯವಶ್ಯಕ ಎಂದಿದ್ದಾರೆ.

ರಾಜ್ಯಸಭೆ ಸದಸ್ಯ ಜಿಸಿ ಚಂದ್ರಶೇಖರ್ ಬರೆದ ಪತ್ರ

ಭಾರತದಲ್ಲಿ ಕರ್ನಾಟಕ ರಾಜ್ಯವು ಪ್ರಸ್ತುತ ಮೂರನೇ ಅತಿ ಹೆಚ್ಚು ಸುಮಾರು ಒಟ್ಟು 6.9 ಲಕ್ಷಕ್ಕೂ ಹೆಚ್ಚಿನ ನಾಗರಿಕರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ, 9789 ಸೋಂಕಿತರು ಸಾವನ್ನಪ್ಪಿದ್ದಾರೆ. ಇನ್ನು 1,18,851 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ಒಂದರಲ್ಲೇ ಒಟ್ಟು 2,72,371 ಪಾಸಿಟಿವ್ ಪ್ರಕರಣಗಳು ಇದ್ದು 62,105 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 3,290 ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

ರಾಜ್ಯಸಭೆ ಸದಸ್ಯ ಜಿಸಿ ಚಂದ್ರಶೇಖರ್ ಬರೆದ ಪತ್ರ

ವಾರಾಂತ್ಯ ಲಾಕ್​​ಡೌನ್​​ ಮಾಡಿ : ಇಷ್ಟೆಲ್ಲಾ ದೇಶಗಳ ಕಥೆ ನಮ್ಮ ಕಣ್ಣೆದುರಿದ್ದರೂ ಸಹ ತ್ವರಿತ ವೇಗದಲ್ಲಿ ಸೋಂಕು ಹೆಚ್ಚುತ್ತಿದ್ದು, ಕೊರೊನಾ ಪರಿಣಾಮದ ಬಗ್ಗೆ ಜನರಿಗೆ ಅಷ್ಟು ಅರಿವು ಮೂಡುವಂತೆ ಕಾಣುತ್ತಿಲ್ಲ. ಕರ್ನಾಟಕದಲ್ಲಿ ಕೊರೊನಾ ವೇಗವಾಗಿ ಹರಡಲು ಮುಖ್ಯ ಕಾರಣವೆಂದರೆ ರಸ್ತೆಗಳಲ್ಲಿ ಮುಕ್ತ ಓಡಾಟ. ಈ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳದೆ ಹೋದರೆ ಮುಂದೆ ಪರಿಸ್ಥಿತಿ ಕಬ್ಬಿಣದ ಕಡಲೆಯಾಗಿ ಪರಿಣಮಿಸುತ್ತದೆ ಹಾಗೂ ಕೊರೊನಾ ನಿಯಂತ್ರಿಸುವುದು ಅಸಾಧ್ಯವಾಗುತ್ತದೆ.

ಕೊರೊನಾ ಸೋಂಕನ್ನು ಲಘುವಾಗಿ ಪರಿಗಣಿಸಿದಂತೆ ಕಾಣುತ್ತದೆ. ಮುಖ್ಯ ನಗರಗಳಲ್ಲಿ ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ರಾಜ್ಯದ ಸೋಂಕಿತರ ಅರ್ಧದಷ್ಟು ಜನರು ಬೆಂಗಳೂರಿನಲ್ಲಿ ಕೊರೊನಾ ಪೀಡಿತರ ಆಗುತ್ತಿರುವುದರಿಂದ ಮುಖ್ಯವಾಗಿ ಜನರ ಪ್ರಾಣ ಉಳಿಸಬೇಕಾಗಿರುವುದರಿಂದ ಕಡೆಯ ಪಕ್ಷ ವಾರಾಂತ್ಯ ಗಳಾದ ಶನಿವಾರ ಹಾಗೂ ಭಾನುವಾರ ಲಾಕ್ ಡೌನ್ ಮಾಡುವುದು ಅನಿವಾರ್ಯ ವಾಗಿರುವುದರಿಂದ ಸರ್ಕಾರ ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಕೋರುತ್ತೇನೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ABOUT THE AUTHOR

...view details