ಬೆಂಗಳೂರು: ಬಿಜೆಪಿ ಅಭ್ಯರ್ಥಿ ಆಯ್ಕೆ ಫೈನಲ್ ಆಗಿದ್ದು, ಮೇಯರ್ ಅಭ್ಯರ್ಥಿ ರೇಸ್ನಲ್ಲಿದ್ದ ಪದ್ಮನಾಭ ರೆಡ್ಡಿ ಅವರನ್ನು ಹಿಂದಿಕ್ಕಿ ಜೋಗಿ ಪಾಳ್ಯ ವಾರ್ಡ್ ಸದಸ್ಯ ಗೌತಮ್ ಕುಮಾರ್ ಫೈನಲ್ ಆಗಿದ್ದಾರೆಂದು ಸಚಿವ ಆರ್.ಅಶೋಕ್ ಖಚಿತಪಡಿಸಿದರು.
ಮೇಯರ್ ಅಭ್ಯರ್ಥಿಯಾಗಿ ಗೌತಮ್ ಕುಮಾರ್ ಫೈನಲ್
ಮೇಯರ್ ಅಭ್ಯರ್ಥಿ ರೇಸ್ನಲ್ಲಿದ್ದ ಪದ್ಮನಾಭ ರೆಡ್ಡಿ ಅವರನ್ನು ಹಿಂದಿಕ್ಕಿ ಜೋಗಿ ಪಾಳ್ಯ ವಾರ್ಡ್ ಸದಸ್ಯರಾದ ಗೌತಮ್ ಕುಮಾರ್ ಫೈನಲ್ ಆಗಿದ್ದಾರೆಂದು ಸಚಿವ ಆರ್ಅಶೋಕ್ ಖಚಿತಪಡಿಸಿದ್ದಾರೆ.
ಬಿಎಂಪಿ ಕಚೇರಿ ಬಳಿ ಮಾತನಾಡಿದರ ಆರ್.ಅಶೋಕ್, ಪದ್ಮನಾಭರೆಡ್ಡಿ ನಾಮಪತ್ರ ವಾಪಸ್ ಪಡೆದಿದ್ದು, ಗೌತಮ್ ಕುಮಾರ್ ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದಾರೆ. ಇನ್ನು ಉಪಮೇಯರ್ ಸ್ಥಾನಕ್ಕೆ ಮೂರು ಜನ ನಾಮಪತ್ರ ಸಲ್ಲಿಸಿದ್ದು, ಅಭ್ಯರ್ಥಿಗಳ ಜೊತೆ ಮಾತನಾಡಿ ಒಬ್ಬರನ್ನು ಫೈನಲ್ ಮಾಡುವುದಾಗಿ ಸ್ಪಷ್ಟಪಡಿಸಿದರು.
ಅಲ್ಲದೆ ಬಿಜೆಪಿ ಪಕ್ಷವನ್ನು ಆರ್ಎಸ್ಎಸ್ ಕಂಟ್ರೋಲ್ ಮಾಡುತ್ತದೆ ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವ ಆರ್ ಅಶೋಕ್, ಬಿಜೆಪಿ ಯಾರಪ್ಪನ ಸ್ವತ್ತೂ ಅಲ್ಲ, ದಿನೇಶ್ ಗುಂಡೂರಾವ್ ಅವರನ್ನು ಯಾರು ಕಂಟ್ರೋಲ್ ಮಾಡುತ್ತಿದ್ದಾರೆಂದು ನನಗೆ ಗೊತ್ತಿಲ್ಲ. ಸತತ ಒಂದು ವಾರದಿಂದ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆಯನ್ನು ಫೈನಲ್ ಮಾಡಿದ್ದೇವೆ, ಆದರೆ ಮೇಯರ್-ಉಪಮೇಯರ್ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ ಯಾವುದೇ ಸಭೆ ನಡೆದಿಲ್ಲವೆಂದು ಗುಂಡೂರಾವ್ ಟಾಂಗ್ ಕೊಟ್ಟರು.