ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ 18ನೇ ಆರೋಪಿಯನ್ನ ಎಸ್ಐಟಿ ತಂಡ ಇಂದು ಒಂದನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿತ್ತು.
ಈ ವೇಳೆ ಎಸ್ಐಟಿ ಪರ ವಕೀಲರು ಆರೋಪಿ ರಿಷಿಕೇಶ್ ಅಲಿಯಾಸ್ ಮುರುಳಿ, ಗೌರಿ ಹತ್ಯೆ ಪ್ರಕರಣದಲ್ಲಿ ವಿಚಾರಣೆಯ ಅವಶ್ಯಕತೆ ಇರುವ ಹಿನ್ನೆಲೆ ಎಸ್ಐಟಿ ವಶಕ್ಕೆ ಕೇಳಿದ್ರು. ಹೀಗಾಗಿ ಇದನ್ನ ಮಾನ್ಯ ಮಾಡಿದ ನ್ಯಾಯಾಲಯ ಆರೋಪಿಯ ಹೇಳಿಕೆ ದಾಖಲಿಸಿ 15 ದಿವಸಗಳ ಕಾಲ ಎಸ್ಐಟಿ ವಶಕ್ಕೆ ನೀಡಿದೆ.
ಆರೋಪಿಯನ್ನ ವಶಕ್ಕೆ ಪಡೆದ ಎಸ್ಐಟಿ ಜಾರ್ಖಂಡ್ನಲ್ಲಿ ಆರೋಪಿಯನ್ನ ಅರೆಸ್ಟ್ ಮಾಡಿದ್ದ ಎಸ್ಐಟಿ ಆರೋಪಿಯನ್ನು ಬೆಂಗಳೂರಿಗೆ ರೈಲಿನಲ್ಲಿ ಬಾಡಿ ವಾರೆಂಟ್ ಮೂಲಕ ಕರೆತಂದಿತ್ತು. ಈತ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 18ನೇ ಅರೋಪಿ. ಈತನಿಗೆ ಎಸ್ಐಟಿ ಕಳೆದ ಎರಡು ವರ್ಷಗಳಿಂದ ಹುಡುಕಾಟ ನಡೆಸಿತ್ತು.
ರಾಷ್ಟ್ರದಲ್ಲಿ ನಡೆದಿರುವ ವಿಚಾರವಾದಿಗಳ ಹತ್ಯೆಯಲ್ಲಿಯೂ ಈತ ಭಾಗಿಯಾಗಿರುವ ಶಂಕೆ ಇದ್ದು, ಎಸ್ಐಟಿ ಇದರೆಲ್ಲರ ತನಿಖೆ ಮುಂದುವರೆಸಲಿದೆ ಎನ್ನಲಾಗಿದೆ.