ಕರ್ನಾಟಕ

karnataka

ETV Bharat / state

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಜಾಮೀನು ಅರ್ಜಿ ವಜಾ - ಗೌರಿ ಲಂಕೇಶ್ ಹತ್ಯೆ ಪ್ರಕರಣ ಲೆಟೆಸ್ಟ್ ನ್ಯೂಸ್​

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿಬಂಧಿತನಾಗಿದ್ದ ಆರೋಪಿ ಕೆ.ಟಿ. ನವೀನ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಜಾಮೀನು ಅರ್ಜಿ ವಜಾ
Gauri Lankesh murder case

By

Published : Jan 10, 2020, 5:39 PM IST

ಬೆಂಗಳೂರು :ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮೊದಲು ಬಂಧಿತನಾದ ಆರೋಪಿ ಕೆ.ಟಿ. ನವೀನ್ ಕುಮಾರ್ ಸಲ್ಲಿಸಿದ ಜಾಮೀನು ಅರ್ಜಿಯನ್ನ ಇಂದು ಹೈಕೋರ್ಟ್ ವಜಾಗೊಳಿಸಿದೆ.

ಆರೋಪಿಯು ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿ ತೀರ್ಪು ನೀಡಿದೆ.

ಗೌರಿ ಹತ್ಯೆ ಪ್ರಕರಣದಲ್ಲಿ ಮದ್ದೂರು ಮೂಲದ ಕೆ.ಟಿ.ನವೀನ್, ಹೊಟ್ಟೆ ಮಂಜನನ್ನ ಎಸ್ ಐಟಿ ತಂಡ ಮೊದಲು ಬಂಧಿತ್ತು. ಗೌರಿ ಹತ್ಯೆ ಪ್ರಕರಣದಲ್ಲಿ ಕೆ.ಟಿ ನವೀನ್ ಪಾತ್ರ ಸಾಬೀತಾಗಿರುವ ಮಾಹಿತಿಯನ್ನ ಎಸ್ಐಟಿ ತಂಡ ನ್ಯಾಯಲಯಕ್ಕೆ ಒದಗಿಸಿತ್ತು. ಈ ಆಧಾರದ ಮೇಲೆ ನ್ಯಾಯಾಲಯ ಅರ್ಜಿ ವಜಾ ಮಾಡಿದೆ.

2018 ರ ಫ್ರೆಬ್ರವರಿ 16ರಂದು ಮೆಜೆಸ್ಟಿಕ್ ನಿಲ್ದಾಣದ ಬಳಿ ವಶಕ್ಕೆ ಪಡೆದು ಈತನ ಬಳಿಯಿಂದ ನಾಡ ಪಿಸ್ತೂಲ್ ಮತ್ತು 32ರಿವಾಲ್ವರ್ ಐದು ಗುಂಡು ವಶ ಪಡಿಸಿದ್ದರು. ನಂತರ ಗೌರಿಯನ್ನ ಯಾಕೆ ಹತ್ಯೆ ಮಾಡಲಾಗಿದೆ. ಯಾರೆಲ್ಲಾ ಭಾಗಿಯಾದ್ದಾರೆ ಮಾಸ್ಟರ್ ಮೈಂಡ್ ಯಾರು ಅನ್ನೊದರ ಮಾಹಿತಿಯನ್ನ ಈತ ಬಿಚ್ಚಿಟ್ಟಿದ್ದ. ಹೀಗಾಗಿ ಈತನ ಪಾತ್ರ ಪ್ರಮುಖ ಇರುವ ಹಿನ್ನೆಲೆ ಇದೀಗ ನ್ಯಾಯಾಲಯ ಅರ್ಜಿ ವಜಾ ಮಾಡಿದೆ.

ABOUT THE AUTHOR

...view details