ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಶೇ. 95 ರಷ್ಟು ಕೋವಿಡ್ ಸೋಂಕಿತರು ಮನೆಯಿಂದಲೇ ಗುಣಮುಖ: ಗೌರವ್ ಗುಪ್ತಾ

ಕೋವಿಡ್ ಲಕ್ಷಣ ಕಡಿಮೆ ಆಗುತ್ತಿದೆ. ಹೀಗಾಗಿ, ಕೋವಿಡ್ ಕೇರ್ ಸೆಂಟರ್ ಹಾಗು ಹೋಂ ಐಸೋಲೇಷನ್​ನಲ್ಲಿರುವುದು ಅಗತ್ಯವಾಗುತ್ತದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಿಸಿಸಿ ಕೇಂದ್ರ ತೆರೆಯಲು ಸಿದ್ಧತೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

gaurav-gupta-spoke-about-covid-cases
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ

By

Published : Jan 4, 2022, 9:20 PM IST

ಬೆಂಗಳೂರು: ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ದೇಶದ ಎಲ್ಲಾ ಮಹಾನಗರಗಳಲ್ಲೂ ಈ ಪ್ರಕ್ರಿಯೆ ಆಗ್ತಿದೆ. ಬೇರೆ ಅಲೆಗಳಿಗೆ ಹೋಲಿಸಿದಾಗ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದರೂ, ವ್ಯಾಕ್ಸಿನ್ ಪ್ರಮಾಣ ಹೆಚ್ಚಾಗಿರುವುದರಿಂದ ಬಹಳಷ್ಟು ಜನ ಆಸ್ಪತ್ರೆ ಸೇರುವ ಅಗತ್ಯ ಇರುವುದಿಲ್ಲ. 95% ಜನರು ಮನೆಯಿಂದಲೇ ಗುಣಮುಖರಾಗುತ್ತಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಜನತೆಗೆ ಸಮಾಧಾನದ ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿದರು

ಕೋವಿಡ್ ಲಕ್ಷಣ ಕಡಿಮೆ ಆಗುತ್ತಿದೆ. ಹೀಗಾಗಿ, ಕೋವಿಡ್ ಕೇರ್ ಸೆಂಟರ್ ಹಾಗು ಹೋಂ ಐಸೋಲೇಷನ್​ನಲ್ಲಿರುವುದು ಅಗತ್ಯವಾಗುತ್ತದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಿಸಿಸಿ ಕೇಂದ್ರ ತೆರೆಯಲು ಸಿದ್ಧತೆ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ಜೊತೆಗೂ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು.

ಆಸ್ಪತ್ರೆಯಲ್ಲಿ ನಿಗದಿತ ಶುಲ್ಕವನ್ನೇ ತೆಗೆದುಕೊಳ್ಳಬೇಕಾಗುತ್ತದೆ. ಈ ಹಿಂದಿನ ಕೋವಿಡ್ ಅಲೆಗಳ ಸಂದರ್ಭದಲ್ಲಿ ಬಳಸಿಕೊಂಡ ಆ್ಯಂಬುಲೆನ್ಸ್​ಗಳಿಗೆ ಹಾಗು ಇತರ ಸೌಕರ್ಯಗಳ 90% ರಷ್ಟು ಹಣ ಬಿಡುಗಡೆಯಾಗಿದೆ ಎಂದು ಆಯುಕ್ತರು ಇದೇ ಸಂದರ್ಭದಲ್ಲಿ ವಿವರಿಸಿದರು.

ಓದಿ:ಮಗುವಿನ ಪಿತೃತ್ವ ಪರೀಕ್ಷೆ: ಅತ್ಯಾಚಾರ ಆರೋಪಿಯ ಡಿಎನ್ಎ ಪರೀಕ್ಷೆ ಆದೇಶ ಎತ್ತಿಹಿಡಿದ ಹೈಕೋರ್ಟ್

For All Latest Updates

ABOUT THE AUTHOR

...view details