ಹುಬ್ಬಳ್ಳಿ :ಭಾರತೀಯ ರೈಲ್ವೆ ವಲಯದ ಗತಿಶಕ್ತಿ ವಿಶ್ವವಿದ್ಯಾಲಯವು ಹೊಸದಾದ ಬಿ - ಟೆಕ್ ಕೋರ್ಸ್ ಆರಂಭಿಸಿದ ಬೆನ್ನಲ್ಲೇ ಈಗ ಪ್ಲೇಸಮೆಂಟ್ ಸಂಬಂಧಿಸಿದಂತೆ ಏರ್ ಬಸ್ ಸಂಸ್ಥೆಯೊಂದಿಗಿನ ಒಡಂಬಡಿಕೆಗೆ ಭಾರತೀಯ ರೈಲ್ವೆಯು ಸಚಿವ ಅಶ್ವಿನಿ ವೈಷ್ಣವ ನೇತೃತ್ವದಲ್ಲಿ ಸಹಿ ಹಾಕುವ ಮೂಲಕ ಹೊಸ ಯೋಜನೆಗೆ ಹಸಿರು ನಿಶಾನೆ ತೋರಿದರು.
ಗುಜರಾತ್ ರಾಜ್ಯದಲ್ಲಿರುವ ಭಾರತೀಯ ರೈಲ್ವೆಯ ಗತಿಶಕ್ತಿ ವಿಶ್ವವಿದ್ಯಾಲಯು ಬಿ - ಟೆಕ್ ಕೋರ್ಸ್ ಗಳನ್ನು ಟ್ರಾನ್ಸಪೋರ್ಟ್ ಸಂಬಂಧಿಸಿದಂತೆ ವಿಶೇಷ ಕೋರ್ಸ್ ಆರಂಭಿಸಿದ್ದು, ಈ ನಿಟ್ಟಿನಲ್ಲಿ ರೈಲ್ವೆ ಸೇರಿದಂತೆ ಹಲವು ವಲಯಗಳಲ್ಲಿ ವಿಪುಲವಾಗಿ ಅವಕಾಶ ಕಲ್ಪಿಸುವ ಸದುದ್ದೇಶದಿಂದ ಏರ್ ಬಸ್ ಸಂಸ್ಥೆಯೊಂದಿಗೆ ಒಡಂಬಡಿಕೆಗೆ ವರ್ಚುಯಲ್ ಮೂಲಕ ಸಹಿ ಮಾಡಲಾಯಿತು. ಹುಬ್ಬಳ್ಳಿಯ ನೈಋತ್ಯ ರೈಲ್ವೆಯ ಡಿಆರ್ಎಂ ಹಾಗೂ ಜಿಎಂ ಕಚೇರಿಯಲ್ಲಿ ವೀಕ್ಷಣೆಗೆ ವ್ಯವಸ್ಥೆ ಕೂಡ ಮಾಡಲಾಗಿತ್ತು.