ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಗಮನ ಸೆಳೆದ ಗರ್ವ ಬೈಕ್ ರ‍್ಯಾಲಿ: ವೀರ ಯೋಧರಿಗೆ ವಿಶಿಷ್ಟ ಗೌರವ - ಬೈಕ್​ ಕಮ್ಯೂನ್​ ನೇತೃತ್ವದಲ್ಲಿ ಗರ್ವ ಬೈಕ್​ ರ‍್ಯಾಲಿ

ಭಾರತೀಯ ಸೇನಾ ದಿನಾಚರಣೆ ಹಿನ್ನೆಲೆ - ಬೈಕ್​ ಕಮ್ಯೂನ್​ ನೇತೃತ್ವದಲ್ಲಿ ಗರ್ವ ಬೈಕ್​ ರ‍್ಯಾಲಿ - ಭಾರತೀಯ ಯೋಧರಿಗೆ ವಿಶೇಷ ಗೌರವ ಸಲ್ಲಿಸಿದ ಸೂಪರ್​ ಬೈಕರ್​ಗಳು

garva-bike-rally-for-tribute-to-indian-soldiers-in-bengaluru
ಬೆಂಗಳೂರಿನಲ್ಲಿ ಗಮನ ಸೆಳೆದ ಗರ್ವ ಬೈಕ್ ರ‍್ಯಾಲಿ : ವೀರ ಯೋಧರಿಗೆ ವಿಶಿಷ್ಟ ಗೌರವ

By

Published : Jan 7, 2023, 6:04 PM IST

ಬೆಂಗಳೂರಿನಲ್ಲಿ ಗಮನ ಸೆಳೆದ ಗರ್ವ ಬೈಕ್ ರ‍್ಯಾಲಿ : ವೀರ ಯೋಧರಿಗೆ ವಿಶಿಷ್ಟ ಗೌರವ

ಬೆಂಗಳೂರು: ಭಾರತೀಯ ಸೇನೆಯ ಉತ್ಸಾಹವನ್ನು ಸಂಭ್ರಮಿಸುವ ಮತ್ತು ಗೌರವಿಸುವ ಪರಿಕಲ್ಪನೆಯಲ್ಲಿ ಗರ್ವ ಹೆಸರಿನ ಮೋಟಾರ್‌ಸೈಕಲ್ ಸವಾರಿಗೆ ಮೇಜರ್ ಜನರಲ್ ರವಿ ಮುರುಗನ್ ಹಸಿರು ನಿಶಾನೆ ತೋರಿದರು. ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 200 ಸೂಪರ್ ಬೈಕ್​ಗಳು ಮತ್ತು ಕ್ಲಬ್​ಗಳು ಭಾಗವಹಿಸಿದ್ದವು.

ಭಾರತೀಯ ಸೇನಾ ದಿನವನ್ನು ಇದೇ ಮೊದಲ ಬಾರಿಗೆ ನವದೆಹಲಿಯ ಹೊರಗೆ ನಡೆಸಲಾಗುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಸೇನಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರಾಸಂಗಿಕವಾಗಿ, ಬೆಂಗಳೂರು ಹಲವು ಸೂಪರ್ ಬೈಕ್​​ ಕ್ಲಬ್​ಗಳಿಗೆ ನೆಲೆಯಾಗಿದೆ ಮತ್ತು ಭಾರತದ ಏಕೈಕ ಮೋಟರ್​ ಬೈಕಿಂಗ್​ ಅನುಭವದ ಸಂಯೋಜನೆಗೆ ಬಿಗ್ ಬೈಕಿಂಗ್ ಕಮ್ಯೂನ್ ಇಂದು ಮಹತ್ವದ ವೇದಿಕೆಯಾಗಿತ್ತು.

ಭಾರತೀಯ ಸೇನೆಯ ಹುತಾತ್ಮರಿಗೆ ಗೌರವ ಸಲ್ಲಿಸಲು ಮತ್ತು ಅವರ ಶೌರ್ಯವನ್ನು ಗೌರವಿಸಲು ಮತ್ತು ಭಾರತದ ನಾಗರಿಕರಿಗೆ ಹೆಮ್ಮೆಯ ಸಂದೇಶವನ್ನು ತಲುಪಿಸಲು ಮೋಟಾರ್ ಬೈಕಿಂಗ್ ಅನ್ನು ಸಂದೇಶದ ಮಾಧ್ಯಮವಾಗಿ ಬಳಸಿಕೊಳ್ಳಲಾಯಿತು. ಇದರೊಂದಿಗೆ ನಗರದ ಸೂಪರ್ ಬೈಕರ್​ಗಳು ಮತ್ತು ಸಂಬಂಧಿತ ಕ್ಲಬ್​ಗಳನ್ನು ಒಗ್ಗೂಡಿಸುವ ಚಿಂತನೆಯೂ ನಡೆಯಿತು.

200ಕ್ಕೂ ಹೆಚ್ಚು ಸೂಪರ್ ಬೈಕರ್​ಗಳು ಭಾಗಿ: "ಗರ್ವ" ಎಂದು ಹೆಸರಿಸಲಾದ ಈ ಉಪಕ್ರಮವು ಬೆಂಗಳೂರು ಆಸುಪಾಸಿನ 200ಕ್ಕೂ ಹೆಚ್ಚು ಸೂಪರ್ ಬೈಕರ್​ಗಳ ಉತ್ಸಾಹಪೂರ್ಣ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಯಿತು. ತಮ್ಮ ಸೂಪರ್ ಬೈಕ್​ಗಳಲ್ಲಿ ಬೆಂಗಳೂರಿನ ಹೃದಯಭಾಗದಲ್ಲಿ ಸಂಚರಿಸಿ, ಶ್ರದ್ಧಾಭರಿತ ದೇಶಭಕ್ತಿಯ ಅಲೆಯನ್ನು ಉತ್ತೇಜಿಸಿದರು. 15 ಜನವರಿ 2023ರಂದು ನಡೆಯಲಿರುವ ಭಾರತೀಯ ಸೇನಾ ದಿನಾಚರಣೆಗೆ ಕೃತಜ್ಞತೆಯ ಭಾವೋದ್ರಿಕ್ತ ಸನ್ನಿವೇಶವೊಂದನ್ನು ಸೃಷ್ಟಿಸುವಲ್ಲಿ ಈ ಬೈಕ್ ಸವಾರಿಯು ಯಶಸ್ವಿಯಾಯಿತು. ಅಲ್ಲದೇ, ಎಂಇಜಿ ಮೈದಾನದಲ್ಲಿ ಮೋಟರ್​ ಸೈಕ್ಲಿಸ್ಟ್​ಗಳಿಗೆ ಪರೇಡ್ ಮಾಡಲು ಅವಕಾಶ ಸಿಕ್ಕಿದ್ದು ವಿಶೇಷವೆನಿಸಿತು.

ಭಾರತೀಯ ಸೇನಾ ದಿನಾಚರಣೆ ಹಿನ್ನಲೆ ಗೌರವ : ಭಾರತೀಯ ಸೇನಾ ದಿನಾಚರಣೆಗೆ ಪೂರ್ವಭಾವಿಯಾಗಿ ಮೇಜರ್ ಜನರಲ್ ರವಿ ಮುರುಗನ್ `ಗರ್ವ' ಹೆಸರಿನ ಮೋಟಾರ್ ಸೈಕಲ್ ಸವಾರಿಗೆ ಹಸಿರು ನಿಶಾನೆ ತೋರಿದರು.

ದೇಶಭಕ್ತಿಯನ್ನು ಪುನರುಜ್ಜೀವನಗೊಳಿಸುವ ಗುರಿ: ಬಿಗ್ ಬೈಕಿಂಗ್ ಕಮ್ಯೂನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕ ಅರುಣ್ ಕುಮಾರ್ ಉಪಕ್ರಮದ ಕುರಿತು ಮಾತನಾಡಿ, ಗರ್ವ-ರೈಡ್ ಫಾರ್ ಅವರ್ ಪ್ರೈಡ್ ಎಂಬುದು ಭಾರತೀಯರ ಮನಸ್ಸು ಮತ್ತು ಹೃದಯದಲ್ಲಿ ದೇಶಭಕ್ತಿಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿರುವ ಉಪಕ್ರಮವಾಗಿದೆ. ನಮ್ಮ ರಾಷ್ಟ್ರವು ಹಲವು ಕಾರಣಗಳಿಂದಾಗಿ ಇಂದು ಜಾಗತಿಕ ಶಕ್ತಿಯಾಗಿ ಮೆರೆಯುತ್ತಿದೆ.

ಭಾರತೀಯ ಸೇನೆಯ ಶೌರ್ಯ ಮತ್ತು ತ್ಯಾಗ, ಅವರ ಸೇವೆ ಮತ್ತು ರಾಷ್ಟ್ರ ಮತ್ತು ನಾಗರೀಕರನ್ನು ರಕ್ಷಿಸುವ ಅವರ ಏಕವ್ಯಕ್ತಿ ಉತ್ಸಾಹವು ಈ ಪೈಕಿ ಪ್ರಮುಖವಾಗಿದೆ. ಅಸಂಖ್ಯಾತ ವೀರರು ಹುತಾತ್ಮರಾಗಿದ್ದು, ಅವರ ತ್ಯಾಗ ದೇಶಕ್ಕೆ ಅಡಿಪಾಯ ಹಾಕಿದೆ. ಈ ಕಾರಣದಿಂದಾಗಿಯೇ ನಾವು ಇಂದು ಆರಾಮವಾಗಿ ವಿಶ್ರಾಂತಿ ಪಡೆಯುತ್ತಿದ್ದೇವೆ. ಅಂತಹ ಶಕ್ತಿಯ ಬಗ್ಗೆ ನಾವು ಹೆಮ್ಮೆಪಡಬೇಕು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬೈಕರ್​​ಗಳು

ಸರಳ ಅರ್ಥಪೂರ್ಣ ಶ್ರದ್ಧಾಂಜಲಿ : ಈ ಶ್ರದ್ಧಾಂಜಲಿ ಸವಾರಿ ಸರಳ ಆದರೆ ಅರ್ಥಪೂರ್ಣವಾದ ಗೌರವವಾಗಿದ್ದು, ನಮ್ಮ ದೇಶದ ನಿಜವಾದ ವೀರರಾದ ಭಾರತೀಯ ಸೈನಿಕರಿಗೆ ಇದನ್ನು ಅರ್ಪಿಸಲು ಬಯಸುತ್ತೇವೆ. ಸೇನಾ ದಿನದ ಈ ಕಾರ್ಯಕ್ರಮವು ಇತಿಹಾಸದಲ್ಲೇ ಅಪೂರ್ವವಾದುದು. ಕಳೆದ 75 ವರ್ಷಗಳಲ್ಲಿ, ನಾಗರೀಕರು ಸೇನಾ ದಿನಾಚರಣೆಯ ಸಕ್ರಿಯ ಭಾಗವಾಗಿದ್ದಾರೆ. ಮತ್ತು ಇದು ನಿಖರವಾಗಿ 'ಗರ್ವ'ವನ್ನು ವಿಶೇಷ ಸಂದರ್ಭವನ್ನಾಗಿ ಮಾಡುತ್ತದೆ. ಈ ದಿನವು ಭಾರತೀಯ ಸೇನೆಯ ಚೈತನ್ಯವನ್ನು ಸಂಭ್ರಮಿಸಲು ಮತ್ತು ಗೌರವಿಸಲು ನಾಗರೀಕರ ಪೂರ್ವಭಾವಿ ಮತ್ತು ಹೆಮ್ಮೆಯ ಭಾಗವಹಿಸುವಿಕೆಯ ಆರಂಭವನ್ನು ಗುರುತಿಸುತ್ತದೆ ಮತ್ತು ಬಿಗ್ ಬೈಕಿಂಗ್ ಕಮ್ಯೂನ್ ಈ ಮಹತ್ವದ ಸಂದರ್ಭದ ಭಾಗವಾಗಿರಲು ಹೆಮ್ಮೆ ಪಡುತ್ತದೆ ಎಂದು ಹೇಳಿದರು.

ದೇಶಕ್ಕೆ ಒಳ್ಳೆಯ ಮಾದರಿ: ಮೇಜರ್ ಜನರಲ್ ರವಿ ಮುರುಗನ್ ಮಾತನಾಡಿ, ಗರ್ವ ರೈಡ್‌ಗೆ ತಮ್ಮ ಪೂರ್ಣ ಬೆಂಬಲವನ್ನು ನೀಡಿದರು. ಇಂತಹ ಉಪಕ್ರಮಗಳಿಂದ ದೇಶಕ್ಕೆ ಒಳ್ಳೆಯದಾಗುತ್ತದೆ. ಇದನ್ನೂ ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಗರ್ವ ಮಾದರಿಯ ಚಟುವಟಿಕೆಗಳು ಒಗ್ಗಟ್ಟನ್ನು ಮೂಡಿಸುತ್ತವೆ ಮತ್ತು ನಾಗರೀಕರು ಮತ್ತು ಸೇನೆಯ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಮುಂಬರುವ ವರ್ಷಗಳಲ್ಲಿ ವೃತ್ತಿಜೀವನದ ಆದ್ಯತೆಯ ಆಯ್ಕೆಯಾಗಿ ಭಾರತೀಯ ಸೇನೆಯನ್ನು ಉತ್ತೇಜಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಹಲವು ಕ್ಲಬ್ ಭಾಗಿ: ಡೆಸ್ಮೋ ಓನರ್ಸ್ ಕ್ಲಬ್ - ಡುಕಾಟಿ ಬೆಂಗಳೂರು, ಇಂಟರ್‌ನ್ಯಾಶನಲ್ ಫೆಲೋಶಿಪ್ ಆಫ್ ಮೋಟಾರ್‌ಸೈಕ್ಲಿಂಗ್ ರೋಟೇರಿಯನ್ಸ್ (ಇಂಡಿಯಾ ಚಾಪ್ಟರ್), ಬೈಕಿಂಗ್ ಬಡ್ಡೀಸ್, ಬೆಂಗಳೂರು ಆರ್.ಡಿ 350 ಕ್ಲಬ್, ಸ್ಪೆಷಲ್ ಇನಿಶಿಯೇಟಿವ್ ರೈಡರ್ಸ್, ಬೆಂಗಳೂರು ಬೆನೆಲಿಯನ್ಸ್, ಹಾರ್ಲೆ ಓನರ್ಸ್ ಗ್ರೂಪ್ - ಟಸ್ಕರ್ ಚಾಪ್ಟರ್ ಬೆಂಗಳೂರು, ಮತ್ತು ಶೌರ್ಯ - ಹೆಚ್. ಡಿ. ಎಫ್. ಸಿ ಲೈಫ್ ಇನಿಶಿಯೇಟಿವ್ ಸೇರಿದಂತೆ ಹಲವಾರು ಸೂಪರ್‌ಬೈಕರ್ ಕ್ಲಬ್‌ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ಹುತಾತ್ಮರ ಸಮಾಧಿಗಳಿಂದ ತರಲಾಗಿದ್ದ ಮಣ್ಣು: ದ್ವಿಚಕ್ರವಾಹನ ಸವಾರರ ಜೊತೆಗೆ, ಉಮೇಶ್ ಗೋಪಿನಾಥ್ ಜಾಧವ್ ಕಳೆದ ಮೂರು ವರ್ಷಗಳಿಂದ ದೇಶದ ಉದ್ದಗಲಕ್ಕೂ ಸುತ್ತಾಡಿ, ಹುತಾತ್ಮರ ಕುಟುಂಬಗಳನ್ನು ವೈಯಕ್ತಿಕವಾಗಿ ಭೇಟಿಯಾಗಿ ಹುತಾತ್ಮರ ಊರು ಮತ್ತು ಸಮಾಧಿಗಳಿಂದ ಸಂಗ್ರಹಿಸಿದ ಮಣ್ಣನ್ನು ತಂದಿದ್ದು "ಗರ್ವ" ರೈಡ್‌ನ ಪ್ರಮುಖ ಅಂಶವಾಗಿತ್ತು.

ಇದನ್ನೂ ಓದಿ :ಯುದ್ಧಭೂಮಿ ಸಿಯಾಚಿನ್​ನಲ್ಲಿ ತ್ರಿವರ್ಣ ಹಾರಿಸಿದ ಸೈನಿಕರು

ABOUT THE AUTHOR

...view details