ಕರ್ನಾಟಕ

karnataka

ETV Bharat / state

ರಾಜ್ಯದ ಖಾಕಿ ಪಡೆಗೆ 'ಮಹಿಳಾ ಗರುಡಾ ಪಡೆ' ಸೇರ್ಪಡೆ..! - ವಿಶೇಷ ಕಮಾಂಡೋ ಪಡೆ

ಬೆಂಗಳೂರು ಸೇರಿ ರಾಜ್ಯದ ರಕ್ಷಣೆಗಾಗಿ ದೇಶದಲ್ಲಿ ಇದೇ‌‌ ಮೊದಲ ಬಾರಿಗೆ, ಹೊಸದಾಗಿ ಮಹಿಳಾ ಗರುಡಾ ತಂಡ ಫೀಲ್ಡ್​​​ಗೆ ಇಳಿಯುತ್ತಿದೆ.

Garuda force to join the Khaki force of the state
ರಾಜ್ಯದ ಖಾಕಿ ಪಡೆಗೆ 'ಮಹಿಳಾ ಗರುಡಾ ಪಡೆ' ಸೇರ್ಪಡೆ

By

Published : Feb 6, 2021, 8:07 PM IST

ಬೆಂಗಳೂರು: ರಾಜ್ಯ ಆಂತರಿಕಾ ಭದ್ರತಾ ಇಲಾಖೆಗೆ ವಿಶೇಷ ಕಮಾಂಡೋ ಪಡೆ ಕಾಲಿಟ್ಟಿದೆ. ಕ್ಲಿಷ್ಟಕರ ಪರಿಸ್ಥಿತಿ ಎದುರಿಸಲು ಮಹಿಳಾ ಕಮಾಂಡೊ ಪಡೆ ತಯಾರಾಗಿದ್ದು, ಅವರ ತಯಾರಿ ಖಾಕಿ ಪಡೆಯನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.

ರಾಜಧಾ‌ನಿ ಬೆಂಗಳೂರು ಸೇರಿ ರಾಜ್ಯದ ರಕ್ಷಣೆಗಾಗಿ ದೇಶದಲ್ಲಿ ಇದೇ‌‌ ಮೊದಲ ಬಾರಿಗೆ, ಹೊಸದಾಗಿ ಮಹಿಳಾ ಗರುಡಾ ತಂಡ ಫೀಲ್ಡ್​​​ಗೆ ಇಳಿಯುತ್ತಿದೆ. ಅತ್ಯುತ್ತಮ ತರಬೇತಿಯೊಂದಿಗೆ ಉಗ್ರರ ವಿರುದ್ಧ ಸಮರ, ಒತ್ತೆಯಾಳುಗಳ ರಕ್ಷಣೆ, ಕಟ್ಟಡಗಳ ಹೈಜಾಕ್ ಸಮಯದಲ್ಲಿ ಶಸ್ತ್ರಸಜ್ಜಿತ ತಂಡ ಮಿಂಚಿನಂತೆ ಕಾರ್ಯನಿರ್ವಹಿಸಲಿದೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕಮಾಂಡೋ ಪಡೆಯೊಂದು ಕಾರ್ಯ ನಿರ್ವಹಿಸಲು ಸನ್ನದ್ಧವಾಗಿದೆ. ಐಎಸ್​​​ಡಿ ಪೊಲೀಸರ ಅಧೀನದಲ್ಲಿ ತರಬೇತಿಗೊಂಡ ಮಹಿಳಾ ಗರುಡಾ ಪಡೆ ತಯಾರಾಗಿದ್ದು, ರಾಜ್ಯದಲ್ಲಿ ಎದುರಾಗುವ ಸಂದಿಗ್ಧ ಪರಿಸ್ಥಿತಿಗಳನ್ನ ಎದುರಿಸಲು ಈ ಪಡೆಯನ್ನ ಸಜ್ಜುಗೊಳಿಸಲಾಗಿದೆ.

ರಾಜ್ಯದ ಖಾಕಿ ಪಡೆಗೆ 'ಮಹಿಳಾ ಗರುಡಾ ಪಡೆ' ಸೇರ್ಪಡೆ

ಈ ಪಡೆಯಲ್ಲಿ 16 ಜನ ಮಹಿಳೆಯರಿದ್ದು, ಅವರಿಗೆ ಪುರುಷರಂತೆ ಅತಿ ಕಠಿಣ ತರಬೇತಿ ನೀಡಿ ಅಣಿಗೊಳಿಸಲಾಗಿದೆ. ಹೊಸೂರು ರಸ್ತೆಯ ಕೂಡ್ಲು ಗೇಟ್ ಬಳಿ ವಿಶೇಷ ತರಬೇತಿ ನೀಡಲಾಗಿದ್ದು, ಬಾಂಬ್‌ ಸ್ಪೋಟ, ಕಟ್ಟಡಗಳ ಹೈಜಾಕ್ ಸೇರಿ ಹಲವಾರು ಸನ್ನಿವೇಶಗಳನ್ನ ಈ ತಂಡ ಸಮರ್ಥವಾಗಿ ಎದುರಿಸಲು ಸಜ್ಜಾಗಿದೆ‌.

ಇನ್ನೂ ಈ ತಂಡದ ತರಬೇತಿ ಮತ್ತು ನೇತೃತ್ವವನ್ನು ಎಸ್​​ಪಿ ಮಧುರವೀಣಾ ವಹಿಸಿದ್ದು, ನಿವೃತ್ತ ಕಮಾಂಡರ್​​ಗಳಿಂದ ಎಲ್ಲಾ ರೀತಿಯ ತರಬೇತಿಯನ್ನು ಕೊಡಿಸಲಾಗುತ್ತಿದೆ. ಮಹಿಳಾ ಕಮಾಂಡೋಗಳು 30 ವರ್ಷ ವಯಸ್ಸಿನವರೆಗೆ ಗರುಡಾ ಪೋರ್ಸ್​​​ನಲ್ಲಿ ಕಾರ್ಯ ನಿರ್ವಹಿಸಬಹುದು. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರುವ ಪೊಲೀಸ್ ಸಿಬ್ಬಂದಿಯನ್ನು ಈ ಪಡೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಪುರುಷ ಕಮಾಂಡೋಗಳಂತೆ ಮಹಿಳಾ ಕಮಾಂಡೋ ಪಡೆ ಸಹ ಎಲ್ಲರಂತೆ ಮುನ್ನುಗ್ಗುವ ಸಾಮರ್ಥ್ಯ ಹೊಂದಿದ್ದು, ಪೊಲೀಸ್ ಇಲಾಖೆಗೆ ಹೊಸ ಬಲ ಬಂದಂತಾಗಿದೆ. ದೇಶದಲ್ಲಿ ಮಹಿಳಾ ಕಮಾಂಡೋ ಪಡೆಯನ್ನು ಸನ್ನದ್ದಗೊಳಿಸಿದ ಮೊದಲ ರಾಜ್ಯ ಕರ್ನಾಟಕ ಎಂದು ಹಿರಿಯ ಅಧಿಕಾರಿಗಳು ಸಂತಸಗೊಂಡಿದ್ದಾರೆ.

ABOUT THE AUTHOR

...view details