ಬೆಂಗಳೂರು : ನಗರದಲ್ಲಿ ವೀಲಿಂಗ್ಗೆ ಬ್ರೇಕ್ ಹಾಕಲು ಪೊಲೀಸರು ವಿನೂತನ ಪ್ಲ್ಯಾನ್ ಮಾಡಿದ್ದಾರೆ. ಇತ್ತೀಚೆಗೆ ವೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಕರ್ಕಶ ಶಬ್ದ ಬರುವ ಸೈಲೆನ್ಸರ್ ಅಳವಡಿಸಿಕೊಂಡು ತಿರುಗಾಡುತ್ತಿರುತ್ತಾರೆ. ಹಾಗಾಗಿ ಸೈಲೆನ್ಸರ್ ಹಾಕಿಕೊಡುವ ಗ್ಯಾರೇಜ್ ಮಾಲೀಕರಿಗೂ ದಂಡ ವಿಧಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಎಚ್ಚರ.. ಕರ್ಕಶ ಸೈಲೆನ್ಸರ್ ಹಾಕಿ ಕೊಡುವ ಗ್ಯಾರೇಜ್ ಮಾಲೀಕರಿಗೂ ಕಾದಿದೆ ಶಿಕ್ಷೆ.. !
ವೀಲಿಂಗ್ ಗೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ವಿನೂತನ ಪ್ಲ್ಯಾನ್ ಮಾಡಿದ್ದಾರೆ. ವೀಲಿಂಗ್ ಮಾಡುವ ಬೈಕ್ಗಳಿಗೆ ಸೈಲೆನ್ಸರ್ ಹಾಕಿಕೊಡುವ ಗ್ಯಾರೇಜ್ ಮಾಲೀಕರಿಗೆ ದಂಡ ವಿಧಿಸೋಕೆ ಮುಂದಾಗಿದ್ದಾರೆ.
ಗ್ಯಾರೇಜ್
ವೀಲಿಂಗ್ ಮಾಡಿದ್ದ 16 ಜನರನ್ನು ಬಂಧಿಸಿರುವ ಬಸವನಗುಡಿ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಬಗ್ಗೆ ಟ್ರಾಫಿಕ್ ಹೆಚ್ಚುವರಿ ಆಯುಕ್ತ ರವಿಕಾಂತೇಗೌಡ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಮಾಹಿತಿ ನೀಡಿದ್ದರು.
ವರದಿಯನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಕಮಿಷನರ್, ಕೇವಲ ವೀಲಿಂಗ್ ಮಾಡುವವರು ಅಷ್ಟೇ ಅಲ್ಲ, ಇನ್ಮುಂದೆ ಸೈಲೆನ್ಸರ್ ಅಳವಡಿಕೊಡುವ ಗ್ಯಾರೇಜ್ ಮಾಲೀಕರನ್ನು ಹಿಡಿದು ದಂಡ ವಿಧಿಸಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ.