ಬೆಂಗಳೂರು: ಗಾಂಜಾ ದಂಧೆಕೋರರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ಸ್‌ಪೆಕ್ಟರ್ ಶ್ರೀಮಂತ ಇಲ್ಲಾಳ್ ಇನ್ನೂ ಸಹ ಚೇತರಿಕೆ ಕಂಡಿಲ್ಲ. ಮೂರು ತಿಂಗಳಿನಿಂದಲೂ ಓಲ್ಡ್ ಏರ್ಪೋರ್ಟ್ ರಸ್ತೆಯ ಖಾಸಗಿ ಅಸ್ಪತ್ರೆಯ ಐಸಿಯುನಲ್ಲಿ ಶ್ರೀಮಂತ ಇಲ್ಲಾಳ್ಗೆ ಚಿಕಿತ್ಸೆ ಮುಂದುವರೆದಿದ್ದು ಅರೆ ಪ್ರಜ್ಞಾವಸ್ಥೆಯಲ್ಲಿದ್ದಾರೆ.
ಮೆದುಳು ಭಾಗದಲ್ಲಿ ಹೆಚ್ಚಿನ ಗಾಯವಾಗಿರುವುದರಿಂದ ನಿನ್ನೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಈವರೆಗೆ ಒಟ್ಟು ನಾಲ್ಕು ಸರ್ಜರಿ ಮಾಡಲಾಗಿದೆ. ಕಲಬುರಗಿ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಶ್ರೀಮಂತ ಇಲ್ಲಾಳ್ ಕಳೆದ ಸೆಪ್ಟೆಂಬರ್ನಲ್ಲಿ ಪ್ರಕರಣವೊಂದರ ಆರೋಪಿಗಳ ಬಂಧನಕ್ಕೆ ಮಹಾರಾಷ್ಟ್ರಕ್ಕೆ ತೆರಳಿದ್ದಾಗ ಅವರ ಮೇಲೆ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು.