ಬೆಂಗಳೂರು: ಸ್ಯಾಂಡಲ್ವುಡ್ ನಟಿಯೊಬ್ಬರಿಗೆ ಆಪ್ತನಾಗಿರುವ ಕಾರ್ತಿಕ್ನನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ತನಿಖೆಯಲ್ಲಿ ಸ್ಪೋಟಕ ಮಾಹಿತಿ ಹೊರಹಾಕಿದ್ದಾನೆ. ಕಾರ್ತಿಕ್ ರಾಜ್ ಮಾದಕ ವ್ಯಸನಿ ಎಂದು ಒಪ್ಪಿಕೊಂಡಿದ್ದಾನೆ. ಇನ್ನು ಈತನ ಕೆಲ ಮಾಹಿತಿ ಮೇರೆಗೆ ತನಿಖೆ ಚುರುಕುಗೊಳಿಸಿದ್ದಾರೆ.
ರಾಗಿಣಿ ಆಪ್ತ ರವಿಶಂಕರ್ ಹಾಗೂ ಸಂಜನಾ ಗಲ್ರಾನಿ ಆಪ್ತ ರಾಹುಲ್ನನ್ನು ವಶಕ್ಕೆ ಪಡೆದ ನಂತರ ಸಿಸಿಬಿ ಅಧಿಕಾರಿಗಳು ಕಾರ್ತಿಕ್ ರಾಜ್ ಎಂಬಾತನನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು. ಈ ವೇಳೆ ಸಿಸಿಬಿ ಪೊಲೀಸರ ಕಣ್ತಪ್ಪಿಸಿ ಕಾರ್ತಿಕ್ ರಾಜ್ ಪರಾರಿಯಾಗಿದ್ದ. ಕಾರ್ತಿಕ್ ರಾಜ್ ಮನೆಗೆ ಹೋಗಿ ವಾಪಸ್ ಆಗಿದ್ದ ಸಿಸಿಬಿ ತಂಡ ಕಾರ್ತಿಕ್ಗಾಗಿ ಶೋಧ ನಡೆಸಿ ಇಂದು ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ.