ಬೆಂಗಳೂರು: ಕೆಪಿಎಲ್ ನಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಹಗರಣ ದಿನದಿಂ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿರುವ ಕೆಪಿಎಲ್ ಫಿಕ್ಸಿಂಗ್ ಹಗರಣವನ್ನು ಬಿಸಿಸಿಐ ಅಧ್ಯಕ್ಷ ಗಂಗೂಲಿ ಗಂಭೀರವಾಗಿ ಪರಿಗಣಿಸಿದ್ದಾರೆ.
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ: ಮಾಹಿತಿ ಕಲೆ ಹಾಕಿದ ದಾದಾ, ದ್ರಾವಿಡ್ ಜೊತೆ ಚರ್ಚೆ - KPL match fixing scam update
ಕೆಪಿಎಲ್ ನಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಹಗರಣ ದಿನದಿಂ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿರುವ ಕೆಪಿಎಲ್ ಫಿಕ್ಸಿಂಗ್ ಹಗರಣವನ್ನು ಬಿಸಿಸಿಐ ಅಧ್ಯಕ್ಷ ಗಂಗೂಲಿ ಗಂಭೀರವಾಗಿ ಪರಿಗಣಿಸಿದ್ದಾರೆ.
ಅಂತಾರಾಷ್ಟ್ರೀಯ ಫಿಕ್ಸಿಂಗ್ ಜಾಲದಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಕೆಲ ಆಟಗಾರರ ವಿಚಾರಣೆಯನ್ನ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ತನಿಖೆ ನಡೆಸಿದ್ದಾರೆ. ಹೀಗಾಗಿ ಈ ಬಗ್ಗೆ ಖುದ್ದು ಚರ್ಚಿಸಿರುವ ಬಿಸಿಸಿಐ ಅಧ್ಯಕ್ಷ ಗಂಗೂಲಿ, ಎನ್ಸಿಯು ಅಧ್ಯಕ್ಷ ರಾಹುಲ್ ದ್ರಾವಿಡ್ ಮತ್ತು ಕೆಲವು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಬಿಸಿಸಿಐ ಅಂಗ ಸಂಸ್ಥೆ ಎನ್ಸಿಯು ದಾಖಲೊಸಿರೋ ಎಫ್‌ಐಆರ್ ಪ್ರತಿಯ ಮಾಹಿತಿ ಕಲೆಹಾಕಿದ್ದಾರೆ.
ಇನ್ನು ಮ್ಯಾಚ್ ಫಿಕ್ಸಿಂಗ್ ಸಂಬಂಧಿಸಿದಂತೆ ಬೆಂಗಳೂರಲ್ಲೆ ಈ ವರೆಗೂ ನಾಲ್ಕು ಎಫ್ ಐಆರ್ ದಾಖಲಾಗಿವೆ. ಇದರಲ್ಲಿ ಬಿಸಿಸಿಐ ಅಂಗ ಸಂಸ್ಥೆ ಎನ್ಸಿಯು ದಾಖಲೊಸಿರುವ ಎಫ್‌ಐಆರ್ ಪ್ರತಿ ಕೂಡ ಈಟಿವಿ ಭಾರತ್ಗೆ ಲಭ್ಯವಾಗಿದೆ . ಇದರಲ್ಲಿ ಎಸಿಯು ಮ್ಯಾನೇಜರ್ ಹರ್ದಯಲ್ ಸಿಂಗ್ ದೂರು ನೀಡಿದ್ದಾರೆ. ಮತ್ತೊಂದೆಡೆ ಸಿಸಿಬಿ ಈಗಾಗಲೇ ಪ್ಯಾಂಥರ್ಸ್ ಮಾಲೀಕ ಅಸ್ಪಕ್ ಆಲು ಹಾಗೂ ಆತನ ಸಹಚರರು, ಕೆಲ ಬೌಲರ್ಗಳ ವಿಚಾರಣೆ ಚುರುಕುಗೊಳಿಸಿದ್ದಾರೆ.