ಕರ್ನಾಟಕ

karnataka

ETV Bharat / state

ಯುವಕನ ಮೇಲಿನ ಹಲ್ಲೆ ಪ್ರಕರಣ: ಮೂವರ ಬಂಧನ, ತಪ್ಪಿಸಿಕೊಂಡ ನಾಲ್ವರು ಆರೋಪಿಗಳಿಗೆ ಖಾಕಿ ಬಲೆ! - kannada news

ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಜಾಲ ಪೊಲೀಸರು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಜಾಲ ಪೊಲೀಸರು ಮೂರು ಜನ ಆರೋಪಗಳನ್ನು ಬಂಧನ

By

Published : Apr 30, 2019, 6:43 PM IST

ಬೆಂಗಳೂರು: ಚಿಕ್ಕಜಾಲ ವಿಐಟಿ ಕ್ರಾಸ್ ಡಾಬಾದಲ್ಲಿ ಯುವಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಜಾಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಚಿಕ್ಕಜಾಲ‌ ಪೊಲೀಸ್ ಠಾಣೆ ವ್ಯಾಪ್ತಿಯ ಸೊಣ್ಣಪನಹಳ್ಳಿ ನಿವಾಸಿಗಳಾದ ಲಾರಿ ಚಾಲಕರಾದ ರಾಜ, ಮಹೇಶ, ದಾಮೋದರ್ ಬಂಧಿತ ಆರೋಪಿಗಳು. ಉಳಿದ ನಾಲ್ಕು ಆರೋಪಿಗಳು ತಪ್ಪಿಸಿಕೊಂಡಿದ್ದು, ಅವರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ ಎಂದು ಡಿಸಿಪಿ ಕಲಾ ಕೃಷ್ಣಮೂರ್ತಿ ಹೇಳಿದರು.

ಯುವಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳ ಬಂಧನ

ಘಟನೆ ಹಿನ್ನೆಲೆ :

ಡಾಬಾದಲ್ಲಿ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಹಲ್ಲೆಗೊಳಾದ ಯುವಕ ಮತ್ತು ಆತನ ಒಬ್ಬರು ಸ್ನೇಹಿತರು ಊಟಕ್ಕೆ ಹೋಗಿದ್ದಾರೆ. ಇದೇ ವೇಳೆ ಅದೇ ಡಾಬಾದಲ್ಲಿ ಊಟ ಮಾಡುತ್ತಿದ್ದ ಆರೋಪಿಗಳು ಆ ಯುವಕನನ್ನು ಸಿಗರೇಟ್ ತರುವಂತೆ ಹೇಳಿದ್ದಾರೆ. ಇದಕ್ಕೆ ಯುವಕ ನಾನು ನಿನ್ನಂತೆಯೇ ಊಟ ಮಾಡಲು ಬಂದಿರುವ ಗ್ರಾಹಕ ಎಂದಾಗ, ಆರೋಪಿಗಳು ನಾನು ಹೇಳಿದ ಮೇಲೆ ಯಾರೇ ಆದರೂ ತಂದುಕೊಡಬೇಕು. ನೀನೂ ಅಷ್ಟೇ ಎಂದು ಆವಾಜ್ ಹಾಕಿದ್ದಾನೆ. ಇದರಿಂದ ಇಬ್ಬರ ನಡುವೆ ಜಗಳ ಶುರುವಾಗಿದೆ.

ಆರೋಪಿಗಳು ಸಿಮೆಂಟ್ ರಾಡ್ ಮತ್ತು ಕುರ್ಚಿಗಳಿಂದ ಯುವಕನ ಮೇಲೆ ಹಲ್ಲೆ ಮಾಡಿದ್ದರಿಂದ, ಆತ ಗಂಭೀರ ಗಾಯಗೊಂಡಿದ್ದ. ತಕ್ಷಣವೇ ಆತನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಪ್ರಕರಣವನ್ನು ದಾಖಲಿಸಿಕೊಂಡಿದ್ದ ಚಿಕ್ಕಜಾಲ ಪೊಲೀಸರು ಕಾರ್ಯಾಚರಣೆ ನಡಸಿ ಪುಡಿ ರೌಡಿಗಳ ಹಲ್ಲೆ ದೃಶ್ಯ ಡಾಬಾದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ಇಂದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಾಲ್ವರು ಆರೋಪಿಗಳಿಗಾಗಿ ತಪ್ಪಿಸಿಕೊಂಡಿದ್ದು, ಅವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ ಅಂತಾ ಡಿಸಿಪಿ ಮಾಹಿತಿ ನೀಡಿದರು.

ABOUT THE AUTHOR

...view details