ಬೆಂಗಳೂರು: ಹಿಂದೂ ಸಂಘಟನೆಗಳು ರಾಜಧಾನಿಯಲ್ಲಿ ಅದ್ಧೂರಿ ಗಣೇಶೋತ್ಸವ ಆಚರಿಸಿ ಸಂಭ್ರಮಿಸಿದರು. ನಾಗರಭಾವಿಯ ಮಲ್ಲತ್ತಹಳ್ಳಿಯ ಗಣೇಶನ ಪೆಂಡಾಲ್ನಲ್ಲಿ ಶ್ರೀರಾಮ ಸೇನೆ ನಗರಾಧ್ಯಕ್ಷ ಚಂದ್ರಶೇಖರ್ ಕೋಟೆ ನೇತೃತ್ವದಲ್ಲಿ ಸಾವರ್ಕರ್, ಬಾಲಗಂಗಾಧರ ತಿಲಕರ ಫೋಟೋ ಇಟ್ಟು ಪೂಜೆ ನಡೆಯಿತು. ಪೆಂಡಾಲ್ ಅಕ್ಕ ಪಕ್ಕದ ಮನೆ ಗೋಡೆಗಳಿಗೂ ಸಾವರ್ಕರ್, ತಿಲಕರ ಪೋಸ್ಟರ್ ಅಂಟಿಸುವುದರ ಜೊತೆಗೆ ಸಾವರ್ಕರ್ ಪುಸ್ತಕ ಹಂಚಿ ಹಬ್ಬ ಆಚರಿಸಿದರು.
ಬೆಂಗಳೂರಿನಲ್ಲಿ ಗಣೇಶೋತ್ಸವ: ಗಮನ ಸೆಳೆದ ತಿಲಕ್, ಸಾವರ್ಕರ್ ಥೀಮ್ ಗಜಾನನ - Tilak Savarkar poster in Ganeshotsav
ಹಿಂದೂ ಸಂಘಟನೆಗಳು ಸೇರಿ ಬೆಂಗಳೂರಿನಲ್ಲಿ ಅದ್ಧೂರಿ ಗಣೇಶೋತ್ಸವ ಆಚರಿಸಿದ್ದಾರೆ. ಸಾವರ್ಕರ್, ಬಾಲಗಂಗಾಧರ ತಿಲಕರ ಫೋಟೋ ಇಟ್ಟು ಪೂಜೆ ಮಾಡಲಾಗಿದೆ.
ತಿಲಕ್, ಸಾರ್ವಕರ್ ಥೀಮ್ ಗಜಾನನ
ವೀರ್ ಸಾವರ್ಕರ್ ಥೀಮ್ ಗಜಾನನ: ಕಾಟನ್ ಪೇಟೆಯಲ್ಲಿ ವೀರ್ ಸಾವರ್ಕರ್ ಥೀಮ್ನಲ್ಲಿ ಗಜಾನನ ಭಕ್ತ ಮಂಡಳಿ ಲಕ್ಕಿ ಬಾಯ್ಸ್ ತಂಡದಿಂದ ಅದ್ಧೂರಿ ಗಣೇಶೋತ್ಸವ ನೆರವೇರಿತು. ತಿಲಕ್ ವೇಷದ ಗಣಪನ ಪಕ್ಕದಲ್ಲಿ ವೀರ್ ಸಾವರ್ಕರ್ ಪ್ರತಿಮೆ ಪ್ರತಿಷ್ಠಾಪಿಸಲಾಗಿತ್ತು.
ಇದನ್ನೂ ಓದಿ:ಮುಸ್ಲಿಂರಿಂದ ಗಣೇಶೋತ್ಸವ ಆಚರಣೆ.. ಕೋಮು ಸೌಹಾರ್ದತೆ ಮೆರೆದ ಚೌತಿ ಹಬ್ಬ
Last Updated : Sep 1, 2022, 12:26 PM IST