ಬೆಂಗಳೂರು:ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮಲ್ಲೇಶ್ವರಂನಲ್ಲಿರುವ 90 ವರ್ಷಗಳ ಹಳೆಯ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ನೆರವೇರುತ್ತಿದೆ.
ಗೌರಿ-ಗಣೇಶ ಹಬ್ಬದ ಸಂಭ್ರಮ: ಶ್ರೀ ಮಹಾಗಣಪತಿ ದೇಗುಲದಲ್ಲಿ ವಿಶೇಷ ಪೂಜೆ - shri mahaganapathi
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ 90 ವರ್ಷಗಳ ಹಳೆಯ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ನೆರವೇರುತ್ತಿದೆ.
![ಗೌರಿ-ಗಣೇಶ ಹಬ್ಬದ ಸಂಭ್ರಮ: ಶ್ರೀ ಮಹಾಗಣಪತಿ ದೇಗುಲದಲ್ಲಿ ವಿಶೇಷ ಪೂಜೆ](https://etvbharatimages.akamaized.net/etvbharat/prod-images/768-512-4313132-thumbnail-3x2-bng.jpg)
ಶ್ರೀಮಹಾಗಣಪತಿ ದೇವಾಲಯ
ಶ್ರೀ ಮಹಾಗಣಪತಿ ದೇವಾಲಯ
ನೂತನ ರೀತಿಯಲ್ಲಿ ಭಗವಂತನ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಗಣಪನ 32 ಅವತಾರಗಳನ್ನು ಭಕ್ತಾದಿಗಳಿಗೆ ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.ಇನ್ನು ದೇವಾಲಯಕ್ಕೆ ಡಿಸಿಎಂ ಅಶ್ವತ್ಥ್ ನಾರಾಯಣ್ ಅವರು ತಮ್ಮ ತಂದೆಯೊಂದಿಗೆ ಆಗಮಿಸಿ ನಾಡಿನ ಜನತೆಯ ಹೆಸರಲ್ಲಿ ಅರ್ಚನೆ ಮಾಡಿಸಿದರು. ವಿನಾಯಕನಿಗೆ ಚಿನ್ನದ ಕವಚ ತೊಡಿಸಿ ಅಲಂಕಾರ ಮಾಡಲಾಗಿದ್ದು, ಭಕ್ತರು ಆಗಮಿಸಿ ವಿಘ್ನವಿನಾಶಕನ ಕೃಪೆಗೆ ಪಾತ್ರರಾದರು.