ಕರ್ನಾಟಕ

karnataka

ETV Bharat / state

ಕೊರೊನಾಗೆ ಸೆಡ್ಡು ಹೊಡೆದು ಸಿಲಿಕಾನ್​ ಸಿಟಿಯಲ್ಲಿ ಗಣಪ ನಾಮ ಸ್ಮರಣೆ! - Ganesha festival in Bangalore

ಭಕ್ತರು ಕೂಡ ಬೆಳಗ್ಗೆಯಿಂದಲೇ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಬಂದು ಗಣೇಶನ ದರ್ಶನ ಮಾಡಿ ಎಲ್ಲ ವಿಘ್ನಗಳ ನಿವಾರಿಸಪ್ಪ ಎಂದು ಗಣಪನಲ್ಲಿ ಬೇಡಿ ಕೊಳ್ಳುತ್ತಿದ್ದಾರೆ.

Ganesha
ಗಣಪ

By

Published : Aug 22, 2020, 5:22 PM IST

ಬೆಂಗಳೂರು: ಇಂದು ನಾಡಿನಾದ್ಯಂತ ವಿಘ್ನ ವಿನಾಶಕ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ಏಕದಂತನನ್ನು ಪೂಜಿಸಿ ಎಲ್ಲ ವಿಘ್ನಗಳನ್ನು ನಿವಾರಿಸುಂವಂತೆ ಜನರು ವಿನಾಯಕನಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಇನ್ನು ಸಿಲಿಕಾನ್ ಸಿಟಿಯಲ್ಲೂ ಹಬ್ಬದ ಕಳೆ ಹೆಚ್ಚಿದ್ದು, ಬೆಂಗಳೂರಿಗರು ಕೊರೊನಾಗೆ ಸೆಡ್ಡು ಹೊಡೆದು, ಗಣೇಶ ಹಬ್ಬವನ್ನು ಸೆಲೆಬ್ರೆಟ್ ಮಾಡ್ತಿದ್ದಾರೆ. ಕೊರೊನಾ ಕಾರಣ ಸಾಮೂಹಿಕ ಗಣೇಶ ಹಬ್ಬವನ್ನು ಆಚರಿಸದಂತೆ ಸರ್ಕಾರ ಜನರಲ್ಲಿ ಮನವಿ ಮಾಡಿದ್ದು, ಸಾರ್ವಜನಿಕವಾಗಿ ಗಣೇಶ ಮೂರ್ತಿ ಕೂರಿಸುವುದು ಕಡಿಮೆಯಾಗಿದೆ. ಆದರೆ, ಗಣೇಶ ದೇವಾಲಯಗಳಲ್ಲಿ ಹಬ್ಬದ ಸಂಭ್ರಮಕ್ಕೇನೂ ಕೊರತೆ ಇಲ್ಲ.

ಹೌದು ಪ್ರತಿವರ್ಷ ಪುಟ್ಟೇನಹಳ್ಳಿಯ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಲಾಗ್ತಿತ್ತು. ಅಲ್ಲದೇ ತರಕಾರಿ, ಹಣ್ಣು ಕಬ್ಬು, ತೆಂಗಿನಕಾಯಿ ಬಳಸಿ ಗಣೇಶ ಮೂರ್ತಿ ಮಾಡಿ ಗ್ರಾಂಡ್ ಆಗಿ ಗಣೇಶ ಹಬ್ಬ ಆಚರಿಸಲಾಗುತಿತ್ತು. ಆದರೆ, ಈ ವರ್ಷ ಕೊರೊನಾ ಕಾರಣ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ ಪುಟ್ಟ ಮಣ್ಣಿನ ಗಣಪ ಮೂರ್ತಿ ಕೂರಿಸಿ, ಬಣ್ಣ ಬಣ್ಣದ ಹೂ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಮಾಡಿ ಅದ್ದೂರಿಯಾಗಿ ಗಣೇಶ ಹಬ್ಬ ಆಚರಿಸಿದ್ದಾರೆ.

ಭಕ್ತರು ಬೆಳಗ್ಗೆಯಿಂದಲೇ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಬಂದು ಗಣೇಶನ ದರ್ಶನ ಮಾಡಿ ಎಲ್ಲ ವಿಘ್ನಗಳ ನಿವಾರಿಸಪ್ಪ ಎಂದು ಗಣಪನಲ್ಲಿ ಬೇಡಿ ಕೊಳ್ಳುತ್ತಿದ್ದಾರೆ. ಅಲ್ಲದೇ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಗಣೇಶನಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಕೊರೊನಾ ಕಾರಣ ಭಕ್ತಾದಿಗಳಿಗೆ ತೊಂದರೆ ಆಗದ ರೀತಿ ಎಲ್ಲ ವ್ಯವಸ್ಥೆ ಮಾಡಿ ಹಬ್ಬ ಆಚರಣೆ ಮಾಡಿದ್ದೇವೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್ ತಿಳಿಸಿದರು.

ಪ್ರತಿವರ್ಷ ನಮ್ಮ ದೇವಸ್ಥಾನದಲ್ಲಿ ಹಣ್ಣು ತರಕಾರಿಗಳಿಂದಲೇ ಗಣೇಶ ಮೂರ್ತಿ ಮಾಡಿ ವಿಜೃಂಭಣೆಯಿಂದ ಹಬ್ಬ ಅಚರಿಸುತ್ತಿದ್ದೆವು. ಆದ್ರೆ ಈ ವರ್ಷ ಕೊರೊನಾ ಕಾರಣ ದೇವಸ್ಥಾನದ ಒಳಗೆ ಹೂಗಳಿಂದ ಅಲಂಕಾರ ಮಾಡಿ ಪುಟ್ಟ ಗಣಪನ ಕೂರಿಸಿ ವಿಶೇಷ ಪೂಜೆ ಮಾಡಿ, ಸದ್ಯ ಎದುರಾಗಿರುವ ಎಲ್ಲ ವಿಘ್ನಗಳು ನಿವಾರಣೆ ಆಗಲಿ ಎಂದು ಪೂಜೆ ಮಾಡಿದ್ದೇವೆ ಎಂದು ಅರ್ಚಕರು ತಿಳಿಸಿದರು.

ABOUT THE AUTHOR

...view details