ಬೆಂಗಳೂರು: ವಿಶ್ವದೆಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ ಮನೆಮಾಡಿದೆ. ನಗರದ ಪುರಾತನ ದೇವಸ್ಥಾನವಾದ ಬಸವನಗುಡಿಯಲ್ಲಿರುವ ದೊಡ್ಡ ಗಣಪತಿಗೆ ಮುಂಜಾನೆಯಿಂದಲೇ ವಿಶೇಷ ಪೂಜೆ - ಪುನಸ್ಕಾರಗಳು ನಡೆಯುತ್ತಿದ್ದು, ಗಣಪನಿಗೆ ಭವ್ಯವಾದ ಅಲಂಕಾರ ಮಾಡಲಾಗಿದೆ.
ಬೆಂಗಳೂರಿನ ದೊಡ್ಡ ಗಣಪತಿ ದೇವಾಲಯದಲ್ಲಿ ಸಂಭ್ರಮದ ವಿನಾಯಕ ಚತುರ್ಥಿ - ಬೆಂಗಳೂರಿನಲ್ಲಿ ದೊಡ್ಡ ಗಣಪತಿ ದೇವಾಲಯದಲ್ಲಿ ಗಣೇಶ್ನಿಗೆ ಪೂಜೆ,
ಚುತುರ್ಥಿ ಹಿನ್ನೆಲೆ ಬೆಂಗಳೂರಿನ ದೊಡ್ಡ ಗಣಪತಿ ದೇವಾಲಯದಲ್ಲಿ ಗಣೇಶ್ನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
![ಬೆಂಗಳೂರಿನ ದೊಡ್ಡ ಗಣಪತಿ ದೇವಾಲಯದಲ್ಲಿ ಸಂಭ್ರಮದ ವಿನಾಯಕ ಚತುರ್ಥಿ Worship in Dodda Ganapa temple, Worship in Dodda Ganapa temple in Bangalore, Dodda Ganapa temple, Dodda Ganapa temple news, ದೊಡ್ಡ ಗಣಪತಿ ದೇವಾಲಯದಲ್ಲಿ ಗಣೇಶ್ನಿಗೆ ಪೂಜೆ, ಬೆಂಗಳೂರಿನಲ್ಲಿ ದೊಡ್ಡ ಗಣಪತಿ ದೇವಾಲಯದಲ್ಲಿ ಗಣೇಶ್ನಿಗೆ ಪೂಜೆ, ದೊಡ್ಡ ಗಣಪತಿ ದೇವಾಲಯದಲ್ಲಿ ಗಣೇಶ್ನಿಗೆ ಪೂಜೆ ಸುದ್ದಿ,](https://etvbharatimages.akamaized.net/etvbharat/prod-images/768-512-8513261-159-8513261-1598073333126.jpg)
ಬೆಂಗಳೂರಿನ ದೊಡ್ಡ ಗಣಪತಿ ದೇವಾಲಯದಲ್ಲಿ ಸಂಭ್ರಮದ ಗಣೇಶ ಚತುರ್ಥಿ
ಬೆಂಗಳೂರಿನ ದೊಡ್ಡ ಗಣಪತಿ ದೇವಾಲಯದಲ್ಲಿ ಸಂಭ್ರಮದ ಗಣೇಶ ಚತುರ್ಥಿ
ಬೆಳಗ್ಗೆಯಿಂದಲೇ ಭಕ್ತರ ದಂಡು ಹರಿದು ಬರುತ್ತಿದ್ದು, ಸರತಿ ಸಾಲಿನಲ್ಲಿ ನಿಂತು ಗಣೇಶನ ದರ್ಶನ ಮಾಡುತ್ತಿದ್ದಾರೆ. ಕೋವಿಡ್ ನಡುವೆ ಗಣೇಶ ಹಬ್ಬದ ಆಚರಣೆ ಹಿನ್ನೆಲೆ ಭಕ್ತರಿಗೆ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಮಾಡಿ ದೇವಾಲಯಕ್ಕೆ ಪ್ರವೇಶ ನೀಡಲಾಗುತ್ತಿದೆ.
ದೊಡ್ಡ ಗಣಪನಿಗೆ ಹೂ ಮತ್ತು ಬೆಳ್ಳಿಯ ಆಭರಣಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ನಾದ ಸ್ವರದ ಮೂಲಕ ಗಣಪನ ಆರಾಧನೆ ಮಾಡಲಾಗುತ್ತಿದೆ. 101 ಲೀ ಹಾಲು, 51 ಲೀ. ಮೊಸರು, 101 ಎಳನೀರು, 5 ಕೆಜಿ ಜೇನು ತುಪ್ಪ, ಸಕ್ಕರೆ ಹಾಕಿ ಪಂಚಾಮೃತ ಅಭಿಷೇಕ ಮಾಡಲಾಗಿದೆ. ರಾತ್ರಿಯವರೆಗೂ ಭಕ್ತರಿಗೆ ದರ್ಶನದ ಅವಕಾಶ ಇರುತ್ತದೆ.