ಬೆಂಗಳೂರು:ಕೊರೊನಾ ಭೀತಿ ನಡುವೆಯೂ ಸರ್ಕಾರ ಜನರ ಧಾರ್ಮಿಕ ಭಾವನೆಗೆ ಸ್ಪಂದಿಸಿ ಗಣೇಶೋತ್ಸವವನ್ನು ಸರಳವಾಗಿ ಆಚರಿಸುವಂತೆ ಸೂಚಿಸಿದೆ. ವಾರ್ಡ್ಗೊಂದೇ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ತಿಳಿಸಲಾಗಿದೆ. ಆದರೆ, ಸರ್ಕಾರ ಅನುಮತಿ ಕೊಟ್ಟರೂ ಸಂಘ ಸಂಸ್ಥೆಗಳು ಮಾತ್ರ ಗಣೇಶೋತ್ಸವ ಆಚರಣೆಗೆ ಮುಂದೆ ಬರುತ್ತಿಲ್ಲ ಅನ್ನೋದು ಅಚ್ಚರಿ ತಂದಿದೆ.
ಹೌದು, ಅಚ್ಚರಿಯಾದರೂ ಇದು ಸತ್ಯ:
ದಕ್ಷಿಣ ವಲಯದ 44 ವಾರ್ಡ್ಗಳಲ್ಲಿ ಕೇವಲ ಒಂದೇ ವಾರ್ಡ್ನಿಂದ ಒಂದು ಸಂಘಟನೆ ಮಾತ್ರ ಗಣೇಶೋತ್ಸವ ಆಚರಣೆಗೆ ಮುಂದೆ ಬಂದಿದೆ. ಯಲಹಂಕದ 11 ವಾರ್ಡ್ಗಳಲ್ಲಿ ಒಂದು ವಾರ್ಡ್ನಿಂದ 7 ಅರ್ಜಿಗಳು ಬಂದಿದೆ. ಪ್ರತೀ ವರ್ಷ ಗಲ್ಲಿ ಗಲ್ಲಿ-ಮೈದಾನದಲ್ಲಿ ಆಚರಿಸಲಾಗುತ್ತಿದ್ದ ಗಣೇಶೋತ್ಸವ ಈ ಸಾರಿ ಕೊರೊನಾ ಕಾರಣದಿಂದ ಮಂಕಾಗಿದೆ ಎನ್ನಲಾಗುತ್ತಿದೆ.
ನಿಯಮದಂತೆ ಪ್ರತೀ ವಲಯಗಳಲ್ಲಿ ಜಂಟಿ ಆಯುಕ್ತರಿಗೆ ಜವಾಬ್ದಾರಿ ನೀಡಿ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ವಾರ್ಡ್ನಲ್ಲಿ ಒಂದು ಕಡೆ ಮಾತ್ರ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿತ್ತು. ವಾರ್ಡ್ಗಳಲ್ಲಿ ಸಂಘಗಳ ಮಧ್ಯೆ ಕಿತ್ತಾಟ ನಡೆಯಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಅಚ್ಚರಿ ಎಂದರೆ ಸಂಘ ಸಂಸ್ಥೆಗಳಿಂದ ಅದೆಷ್ಟೋ ವಾರ್ಡ್ಗಳಲ್ಲಿ ಒಂದು ಮನವಿ ಸಹ ಬಂದಿಲ್ಲ ಎಂದು ವಲಯದ ಜಂಟಿ ಆಯುಕ್ತರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಕೊರೊನಾದಿಂದ ಕಲೆಕ್ಷನ್ ಕಟ್:
ಈ ಮೊದಲು ನಗರದಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಯಾವುದೇ ಬರವಿರಲಿಲ್ಲ. ಆದರೆ, ಕೊರೊನಾ ಬಂದ ಬಳಿಕ ಎಲ್ಲವೂ ಕಡಿಮೆಯಾಗಿದೆ. ಜನರಿಂದ ಹಣ ಸಂಗ್ರಹಿಸಿ ಅದ್ಧೂರಿ ಕಾರ್ಯಕ್ರಮ ಮಾಡಲಾಗುತ್ತಿತ್ತು. ಆದರೆ, ಈಗ ಜನರ ಬಳಿ ಹಣ ಇಲ್ಲ. ದುಡ್ಡು ಕೊಡಲು ಜನ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿಯೇ ಹಲವು ಸಂಘಟನೆಗಳು ಗಣೇಶನ ಪ್ರತಿಷ್ಠಾಪಣೆಗೆ ಹಿಂದೇಟು ಹಾಕಿವೆ ಎಂಬ ಮಾತು ಕೇಳಿಬಂದಿದೆ. ಇನ್ನೊಂದೆಡೆ ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನರು ಸಹ ಇದರ ಸಹವಾಸದಿಂದ ದೂರವೇ ಉಳಿದಿದ್ದಾರೆ. ಮನೆಯಲ್ಲೇ ಸಣ್ಣ ಪ್ರಮಾಣದ ಗಣೇಶನ ಮೂರ್ತಿಯನ್ನಿಟ್ಟು ಪೂಜಿಸಲು ಮುಂದಾಗಿದ್ದಾರೆ.
ಸರ್ಕಾರ ಅನುಮತಿ ಕೊಟ್ಟಿದ್ದು ತಡವಾಯ್ತು!