ಕರ್ನಾಟಕ

karnataka

ETV Bharat / state

ಗಾಂಧೀಜಿ ಅವರ ಸ್ವದೇಶಿ ಪರಿಕಲ್ಪನೆ ನಮಗೆ ದಾರಿದೀಪ.. ಸಚಿವ ಡಾ. ಸುಧಾಕರ್ - Minister Sudhakar

ಬಡತನ, ಅಜ್ಞಾನ, ಅಸಹಿಷ್ಣುತೆ ಮತ್ತು ರೋಗಗಳಿಂದ ಜನರನ್ನು ಮುಕ್ತಗೊಳಿಸುವುದೇ ನಿಜವಾದ ಸ್ವರಾಜ್ಯ ಎಂಬುದು ಮಹಾತ್ಮರ ಸಂದೇಶವಾಗಿತ್ತು. ಇದನ್ನು ಯುವ ಜನತೆ, ವಿದ್ಯಾರ್ಥಿಗಳು, ಶಿಕ್ಷಕರು, ನೀತಿ ‌ನಿರೂಪಕರ ಸಹಿತ ಎಲ್ಲಾ ವರ್ಗದ ಜನ ಅರಿತುಕೊಳ್ಳುವ ಅವಶ್ಯಕತೆ ಇದೆ..

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌

By

Published : Oct 2, 2020, 8:42 PM IST

ಬೆಂಗಳೂರು :ಗಾಂಧೀಜಿ ಅವರ ಸ್ವದೇಶಿ ಪರಿಕಲ್ಪನೆ, ಕೋವಿಡ್​ನೊಂದಿಗಿನ ಪ್ರಸ್ತುತ ಸಂಘರ್ಷದ ಸವಾಲಿನ ಸಂದರ್ಭದಲ್ಲಿ ನಮಗೆ ದಾರಿದೀಪವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್‌ ಹೇಳಿದ್ದಾರೆ. ಗಾಂಧಿ- ಕಿಂಗ್ ಫೌಂಡೇಷನ್‌ ವತಿಯಿಂದ ಮಹಾತ್ಮ ಗಾಂಧೀಜಿ ಅವರ 151ನೇ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ವಿಡಿಯೋ ಸಂವಾದದಲ್ಲಿ ಸಚಿವರು ಭಾಗಿಯಾಗಿದ್ರು.

ಈ ವೇಳೆ ಮಾತನಾಡಿದ ಅವರು, ಮಹಾತ್ಮಗಾಂಧೀಜಿ ಬದುಕಿನುದ್ದಕ್ಕೂ ಸ್ವಾಲಂಬನೆ ಹಾಗೂ ಆದರ್ಶದ ಜೀವನ ನಡೆಸಿ ಮಾದರಿಯಾಗಿದ್ದಾರೆ. ಸದ್ಯದ ಕೋವಿಡ್‌ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಅವರ ಸರಳ, ಸ್ವಾವಲಂಬಿ ಬದುಕು ಪರಿಹಾರ ರೂಪದಲ್ಲಿ ಗೋಚರವಾಗುತ್ತಿವೆ ಎಂದರು.

ಗಾಂಧಿ - ಕಿಂಗ್ ಫೌಂಡೇಷನ್‌ ವತಿಯಿಂದ ಮಹಾತ್ಮಗಾಂಧಿಜೀ ಜಯಂತಿ

ಬಡತನ, ಅಜ್ಞಾನ, ಅಸಹಿಷ್ಣುತೆ ಮತ್ತು ರೋಗಗಳಿಂದ ಜನರನ್ನು ಮುಕ್ತಗೊಳಿಸುವುದೇ ನಿಜವಾದ ಸ್ವರಾಜ್ಯ ಎಂಬುದು ಮಹಾತ್ಮರ ಸಂದೇಶವಾಗಿತ್ತು. ಇದನ್ನು ಯುವ ಜನತೆ, ವಿದ್ಯಾರ್ಥಿಗಳು, ಶಿಕ್ಷಕರು, ನೀತಿ ‌ನಿರೂಪಕರ ಸಹಿತ ಎಲ್ಲಾ ವರ್ಗದ ಜನ ಅರಿತುಕೊಳ್ಳುವ ಅವಶ್ಯಕತೆ ಇದೆ.

ಜೊತೆಗೆ ಪರಸ್ಪರ ಪ್ರೀತಿ ಮತ್ತು ಗೌರವದಿಂದ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದೆ ಎಂದರು. ಆದರ್ಶಯುತ ಮೌಲ್ಯಗಳ ಮೂಲಕ ಮಹಾತ್ಮ ಗಾಂಧೀಜಿ ಅವರು ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರ ಜೀವನ ಮತ್ತು ವಿಚಾರಧಾರೆ ಶಾಶ್ವತವಾಗಿ ಜನಮಾನಸದಲ್ಲಿ ನೆಲೆಯೂರಿರುತ್ತದೆ ಎಂಬ ನಂಬಿಕೆ ತಮ್ಮದು ಎಂದರು.

ABOUT THE AUTHOR

...view details